ಮಧ್ಯ ಸರಕಾರಿ ಪ್ರೌಢಶಾಲೆಗೆ ಎಚ್ ಪಿ ಸಿ ಎಲ್ ಸಂಸ್ಥೆಯ ವತಿಯಿಂದ ಸುಮಾರು 5 ಸ್ಮಾರ್ಟ್ ಟಿವಿ ಮತ್ತು 30 ಬೆಂಚು 30 ಡೆಸ್ಕ್ ಹಸ್ತಾಂತರ

ಸುರತ್ಕಲ್: ಬದುಕಿನ ಔನ್ನತ್ಯಕ್ಕೆ ಗುರು ಹಿರಿಯರ ಮಾರ್ಗದರ್ಶನ ಪ್ರೇರಣೆಯೆ ಕಾರಣ ಸಂಸ್ಕೃತಿ ಸಂಸ್ಕಾರ ಕಲಿಸಿಕೊಟ್ಟು ಬದುಕು ರೂಪಿಸುವ ಶಿಕ್ಷಣ ಸಂಸ್ಥೆಗಳ ಮೇಲೆ ಅಭಿಮಾನವಿರಿಸಿ ಬೆಂಬಲಿಸಬೇಕು ಎಂದು ಬಾಳ ಎಚ್ ಪಿ ಸಿ ಎಲ್ ಸಂಸ್ಥೆಯ ಜನರಲ್ ಮ್ಯಾನೇಜರ್ ಪ್ರಕಾಶ್ ಕುಮಾರ್ ಪಾಟ್ನಾಯಕ್ ನುಡಿದರು ಅವರು ಮಧ್ಯ ಸರಕಾರಿ ಪ್ರೌಢಶಾಲೆಗೆ ಎಚ್ ಪಿ ಸಿ ಎಲ್ ಸಂಸ್ಥೆಯ ವತಿಯಿಂದ ಸುಮಾರು 6 ಲಕ್ಷ ವೆಚ್ಚದಲ್ಲಿ 5 ಸ್ಮಾರ್ಟ್ ಟಿ.ವಿ ಮತ್ತು 30 ಬೆಂಚು 30 ಡೆಸ್ಕ್ ಗಳನ್ನು ಶಾಲೆಗೆ ಹಸ್ತಾಂತರಿಸಿ ಮಾತನಾಡಿದರು ಗ್ರಾಮೀಣ ಭಾಗದ ಸರಕಾರಿ ಶಾಲೆಯು ಅತೀ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಶಾಲೆಯಾಗಿರುವುದು ಶ್ಲಾಘನೀಯ ಮುಂದೆಯೂ ನಮ್ಮ ಸಂಸ್ಥೆಯ ವತಿಯಿಂದ ಸಹಕಾರ ನೀಡಲಾಗುವುದು ಎಂದರು ವೇದಿಕೆಯಲ್ಲಿ ಎಚ್ ಪಿ ಸಿ ಎಲ್ ಸಂಸ್ಥೆಯ ಅಪರೇಶನ್ ವಿಭಾಗದ ಸೀನಿಯರ್ ಮ್ಯಾನೇಜರ್ ವೆಂಕಟೇಶ್ ಚಿಂತಾಕಿಂಡಿ,ಮ್ಯಾನೇಜರ್ ಸೃಷ್ಟಿ, ಎಚ್ ಅರ್ ವಿಭಾಗದ ಅಸಿಸ್ಟೆಂಟ್ ವಾಸುನಾಯಕ್ ,ವಿದ್ಯಾನಿಧಿ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಪುಷ್ಷರಾಜ್ ಶೆಟ್ಟಿ, ಸದಸ್ಯರಾದ ವಜ್ರಾಕ್ಷಿ ಪಿ ಶೆಟ್ಟಿ,ಶಾಲಾಭಿವೃದ್ದಿ ಸಮಿತಿ ಉಪಾಧ್ಯಕ್ಷೆ ಶಶಿಕಲಾ,ಸದಸ್ಯರಾದ ಹರೀಶ್ ಭಂಡಾರಿ, ಲೀಲಾಧರ ಶೆಟ್ಟಿ, ದಿನೇಶ್ ಕುಲ್ಲಂಗಾಲು, ನಿಶ್ಮಿತಾ,ಪ್ರಕಾಶ್ ಶೆಟ್ಟಿ ,ರಿತೇಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಅನಿಲ್ ಸಾಲ್ಯಾನ್ ವಹಿಸಿದ್ದರು ಶಾಲಾ ಶಿಕ್ಷಕಿ ಶೈಲಾ ಸ್ವಾಗತಿಸಿದರು

error: Content is protected !!