
ಪಾವಂಜೆ: ಸಂಘಟನೆ ಬೆಳೆದಾಗ ಸಮಾಜದ ಬೆಳವಣಿಗೆಯಾಗುತ್ತದೆ ದೇವಾಡಿಗರೆಲ್ಲ ಪ್ರೀತಿ ಅಭಿಮಾನದಿಂದ ಒಗ್ಗೂಡಿ ಸಂಘದ ಸರ್ವತೋಮುಖ ಅಭಿವೃದ್ದಿಗಾಗಿ ಶ್ರಮಿಸಬೇಕು ಎಂದು ಪಾವಂಜೆ ದೇವಾಡಿಗ ಸಂಘದ ಅಧ್ಯಕ್ಷ ಅಣ್ಣಪ್ಪ ದೇವಾಡಿಗ ಅವರು ಹೇಳಿದರು ಹೆತ್ತವರು ಮಕ್ಕಳಿಗೆ ವಿಧ್ಯೆಯೊಂದಿಗೆ ಸಂಸ್ಕೃತಿ ಮತ್ತು ಸಂಸ್ಕ್ರವನ್ನು ಕಲಿಸಬೇಕು ಅವಾಗ ಮಕ್ಕಳು ಸುಸಂಸ್ಕೃತರಾಗುತ್ತಾರೆ ಇಂದಿನ ಮಕ್ಕಳೇ ಮುಂದಿನ ಜನಾಂಗವೆಂಬಂತೆ ಸಮಾಜದ ಮಕ್ಕಳು ಯುವಕ ಯುವತಿಯರು ಸಂಘದ ಕಾರ್ಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸಂಘವನ್ನು ಬಲಪಡಿಸಬೇಕು ಎಂದು ಕರೆಯಿತ್ತರು ರವಿವಾರ ಪಾವಂಜೆಯಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು .

ಪ್ರದಾನ ಕಾರ್ಯದರ್ಶಿ ನಿಖಿಲ್ ದೇವಾಡಿಗ ಅವರು ಸ್ವಾಗತಿಸಿ 2025 -26 ನೇ ಸಾಲಿನವಾರ್ಷಿಕ ವರದಿ ವಾಚಿಸಿದರು. ವಾರ್ಷಿಕ ಆಯವ್ಯಯ ಪಟ್ಟಿ ಕೋಶಾಧಿಕಾರಿ ಶುಭ್ರತ್ ದೇವಾಡಿಗ ವಂದಿಸಿದರು 2026 -28ನೇ ಸಾಲಿಗೆ ನೂತನ ಕಾರ್ಯಕಾರಿ ಸಮಿತಿ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ಸಂಘದ ಗೌರವ ಸಲಹೆಗಾರಾದ ಶ್ರೀ ಯಾದವ ದೇವಾಡಿಗರು ನೆರವೇರಿಸಿ ಸಮಾಜದ ಎಲ್ಲ ಸದಸ್ಯರ ಅಭಿಪ್ರಾಯದಂತೆ ಮುಂದಿನ 2026- 28 ನೇ ಅವಧಿಗೆ ಹಿಂದಿನ ಸಮಿತಿಯ ಪ್ರದಾದಿಕಾರಿಗಳು ಮುಂದುವರೆಯುವುದು ಎಂದು ಘೋಷಿಸಿದರು. ಕಟ್ಟಡ ಸಮಿತಿಯ ಪ್ರದಾನ ಕಾರ್ಯದರ್ಶಿ ಶ್ರೀ ಜನಾರ್ದನ ಪಡುಪಣಂಬೂರು ಕಟ್ಟಡ ಮುಂದುವರಿದ ಕಾಮಗಾರಿಯ ಬಗ್ಗೆ ವಿಸ್ಕೃತ ಚರ್ಚೆ ನಡೆಸಿ ಸಂಗ್ರಹದ ಬಗ್ಗೆ ಮಾತನಾಡಿದರು ಕಟ್ಟಡ ಸಮಿತಿಯ ಕಾರ್ಯಾಧ್ಯಕ್ಷ ಯಾದವ ದೇವಾಡಿಗ ಮಹಿಳಾ ವೇದಿಕೆಯ ಅಧ್ಯಕ್ಷೆ ವಿಜಯಲಕ್ಷ್ಮಿ ಜನಾರ್ದನ್, ಯುವ ವೇದಿಕೆಯ ಅಧ್ಯಕ್ಷ ಗಣೇಶ್ ದೇವಾಡಿಗ ಪಂಜ ಉಪಸ್ಥಿತರಿದ್ದರು. ಶ್ರೀಮತಿ ಸೌಮ್ಯ ಸುರೇಂದ್ರ ಪಾವಂಜೆ ಪ್ರಾಥಿಸಿದರು .ಉಪಾಧ್ಯಕ್ಷ ಸತೀಶ್ ಎನ್ ದೇವಾಡಿಗ ಧನ್ಯವಾದ ನೀಡಿದರು ಎಲ್ಲರೂ ಪದಾಧಿಕಾರಿಗಳಿಗೆ ಅಭಿನಂದಿಸಿದರು.