
ಸುರತ್ಕಲ್: ಚೇಳಾಯರು ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ ಮತ್ತು ನಾಯಕತ್ವ ಹಾಗೂ ಕೌಶಲ್ಯ ಅಭಿವೃದ್ಧಿ ಮಾಹಿತಿ ಶಿಬಿರ ನಡೆಯಿತು. ಕಾರ್ಯಕ್ರಮವನ್ನು ಚೇಳೈರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಯಾನಂದ ಚೇಳೈರು ಉದ್ಘಾಟಿಸಿದರು.
ವೇದಿಕೆಯಲ್ಲಿ ಮಂಗಳೂರು ಸ್ವಸ್ತಿಕ್ ಬಿಸಿನೆಸ್ ಸ್ಕೂಲ್ ಅಧ್ಯಕ್ಷರಾದ ರಾಘವೇಂದ್ರ ಹೊಳ್ಳ,ಚೇಳೈರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುಷ್ಷರಾಜ್ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ವೆಂಕಟೇಶ ಶೆಟ್ಟಿ, ಚೇಳೈರು ವಿವೇಕಾನಂದ ಯುವಕ ಮಂಡಲದ ಅಧ್ಯಕ್ಷ ಸೂರ್ಯಕಾಂತ್ ಕೊಲ್ಯ, ಕೊಲ್ಯ ಮುಕಾಂಬಿಕಾ ಕ್ರಿಕೇಟರ್ಸ್ ಅಧ್ಯಕ್ಷ ಗಣೇಶ್ ಕೋಟ್ಯಾನ್, ಗೋಪಾಲಕೃಷ್ಣ ಕುಲಾಲ್, ಪ್ರಾದ್ಯಾಪಕ ಚಂದ್ರನಾಥ್, ಪ್ರಾದ್ಯಾಪಕಿ ಶೋಭಾ ಶರ್ಮ ಮುಂತಾದವರು ಉಪಸ್ಥಿತರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಜ್ಯೋತಿ ಚೇಳೈರು ವಹಿಸಿದ್ದರು ನೂತನ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಪ್ರೇಮ್, ಉಪಾಧ್ಯಕ್ಷ ಪ್ರಜ್ವಲ್, ಸಾಂಸ್ಕೃತಿಕ ಕಾರ್ಯದರ್ಶಿ ತರುಣ್ ರಾಜ್, ಕ್ರೀಡಾ ಕಾರ್ಯದರ್ಶಿ ಬಿಂದುಶ್ರೀ, ಅರೋಗ್ಯ ಮತ್ತು ಸ್ವಚ್ಚತಾ ಕಾರ್ಯದರ್ಶಿ ಮೇಘ, ಮತದಾರ ಸಾಕ್ಷರತಾ ಸಂಘದ ಕಾರ್ಯದರ್ಶಿ ಮಲ್ಲವ್ವ ಅಯ್ಕೆಯಾದರು ಇದೇ ಸಂದರ್ಭದಲ್ಲಿ ನಾಯಕತ್ವ ಮತ್ತು ಕೌಶಲ್ಯ ಅಭಿವೃದ್ಧಿ ಬಗ್ಗೆ ರಾಘವೇಂದ್ರ ಹೊಳ್ಳ ಅವರು ತರಬೇತಿ ನೀಡಿದರು ಮತ್ತು ದ್ವೀತಿಯ ಪಿ,ಯು,ಸಿ ಯಲ್ಲಿ ಅತ್ಯದಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.