
ಮೂಡಬಿದ್ರೆ: ಸಂಸಾರದಲ್ಲಿನ ಜಗಳದ ಕಾರಣಕ್ಕೆ ಪತ್ನಿ ಮತ್ತು ಮಗುವನ್ನು ಆಕೆಯ ಮನೆಯವರು ದೂರ ಮಾಡಿದರು ಎಂಬ ಕಾರಣಕ್ಕೆ ಮನನೊಂದ ಯುವಕನೊಬ್ಬ ಸೀಲಿಂಗ್ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಠಾಣಾ ವ್ಯಾಪ್ತಿಯ ಗಂಟಲ್ ಕಟ್ಟೆಯಲ್ಲಿ ಬೆಳಕಿಗೆ ಬಂದಿದೆ.
ಮಿತ್ತಬಾಗಿಲು ಗ್ರಾಮದ ಕಾಜೂರು ನಿವಾಸಿ ಅಬೂಸ್ವಾಲಿಹ್ ಮುಸ್ಲಿಯಾರ್ ಎಂಬವರ ಪುತ್ರ ಅನ್ವರ್ ಸಾವಿಗೆ ಶರಣಾದ ದುರ್ದೈವಿ ಎಂದು ತಿಳಿದು ಬಂದಿದೆ.
ಅನ್ವರ್ ಗಂಟಲ್ ಕಟ್ಟೆಯಲ್ಲಿ ತಾವು ವಾಸವಿದ್ದ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೂ ಮುನ್ನ ಅನ್ವರ್ ತನ್ನ ಅಕ್ಕನಿಗೆ ವಾಟ್ಸಪ್ ವಾಯ್ಸ್ ಮೆಸೇಜ್ ಕಳುಹಿಸಿದ್ದು ಅದರಲ್ಲಿ ತಮ್ಮ ಸಾವಿಗೆ ಪತ್ನಿ ಹಾಗೂ ಮಗುವನ್ನು ತನ್ನಿಂದ ದೂರ ಮಾಡಿದ ಹೆಂಡತಿಯ ಕಡೆಯ ಆರು ಮಂದಿ ಕಾರಣ ಎಂಬುದಾಗಿ ತಿಳಿಸಿದ್ದಾರೆ. ಮೂಡಬಿದ್ರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.