
ಬಂಡೀಪುರ: ರಕ್ಷಿತಾರಣ್ಯದಲ್ಲಿ ಮೂವರು ಅರಣ್ಯ ಅಧಿಕಾರಿಗಳು ಮದ್ಯ ಸೇವನೆ ಮಾಡಿದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಘಟನೆ ಸಂಬಂಧ ಕರ್ತವ್ಯಲೋಪ ಎಸಗಿದ ಆರೋಪದ ಮೇಲೆ ವಲಯ ಅರಣ್ಯಾಧಿಕಾರಿಯನ್ನು ಅಮಾನತು ಮಾಡಲಾಗಿದೆ. ಮದ್ದೂರು ವನ್ಯಜೀವಿ ವಲಯದ ಡಿ.ಪುನೀತ್ ಕುಮಾರ್ ಅಮಾನತಾದ ಅಧಿಕಾರಿ.
ಮದ್ದೂರು ವಲಯದ ಕಳ್ಳ ಬೇಟೆ ಶಿಬಿರದ ಬಳಿಯ ಹುಲಿ ಕಟ್ಟೆಯಲ್ಲಿ ಮೂವರು ಮದ್ಯ ಸೇವನೆ ಮಾಡಿದ್ದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಪ್ರಕರಣಕ್ಕೆ ಸಂಬಂದಿಸಿದಂತೆ ಅರಣ್ಯ ಇಲಾಖೆ ಮೂವರ ವಿರುದ್ಧ ಎಪ್ಐಆರ್ ದಾಖಲಿಸಿದೆ.
ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದ ಮಹದೇವಪ್ರಸಾದ್ ಬಿನ್ ನಾಗಪ್ಪ(38), ಗುಂಡ್ಲುಪೇಟೆ ಪಟ್ಟಣದ ಗಂಗಾಧರ್ ಬಿನ್ ನಾಗೇಗೌಡ(50) ಹಾಗೂ ಕಗ್ಗಳ ಗ್ರಾಮದ ಚೇತನ್ ಬಿನ್ ನಂಜಪ್ಪ(33) ಎಂಬ ಮೂವರ ವಿರುದ್ಧ ಕೇಸ್ ದಾಖಲಾಗಿದ್ದು, ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
