
ಸುರತ್ಕಲ್: ಸುಭಾಷಿತನಗರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಷನ್ ನ ಪರವಾಗಿ ದೇಣಿಗೆ ರೂಪದಲ್ಲಿ ಎರಡು ಕಡೆ ಅಡ್ಡ ರಸ್ತೆಯಲ್ಲಿ ರಸ್ತೆ ಸುರಕ್ಷತಾ ಉಬ್ಬು ದರ್ಪಣವನ್ನು ಶ್ರೀ ದುರ್ಗಾ ಫ್ಯಾಬ್ರಿಕೇಷನ್ ವಕ್ಸ್೯ ಸುರತ್ಕಲ್ ಇದರ ಮಾಲಕ ದಿನೇಶ್ ಶೆಟ್ಟಿ ಕಬ್ಬಿನಹಿತ್ಲು ಒದಗಿಸಿ ಕೊಟ್ಟಿದ್ದು, ಇದರ ಉದ್ಘಾಟನೆಯನ್ನು ಅಸೋಸಿಯೇಶನ್ ನ ಅಧ್ಯಕ್ಷರಾದ ರಮೇಶ್ ಶೆಟ್ಟಿ ಮತ್ತು ಪದಾಧಿಕಾರಿಗಳು ನೆರವೇರಿಸಿದರು.

ಈ ಸಂದರ್ಭದಲ್ಲಿ ಶ್ರೀ ದುರ್ಗಾ ಫ್ಯಾಬ್ರಿಕೇಷನ್ ಮಾಲಕ ದಿನೇಶ್ ಶೆಟ್ಟಿ ಕಬ್ಬಿನಹಿತ್ಲು, ಸುಭಾಷಿತನರ ರೆಸಿಡೆಂಟ್ಸ್ ವೆಲ್ ಫೇರ್ ಅಸೋಸಿಯೇಶನ್ ನ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ, ಕೋಶಾಧಿಕಾರಿ ನರಸಿಂಹ ಸುವರ್ಣ, ಸಂಘಟನಾ ಕಾರ್ಯದರ್ಶಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು, ಜೊತೆ ಕಾರ್ಯದರ್ಶಿ ಲಕ್ಷ್ಮೀಚಂದ್ರಶೇಖರ ಆಚಾರ್ಯ, ಕಮಲಾಕ್ಷಿ ತಾರಾನಾಥ ಸಾಲ್ಯಾನ್, ಪ್ರೇಮನಾಥ ಹೆಗ್ಡೆ, ನಾಗಣ್ಣ ಶೆಟ್ಟಿ, ಸಹನಾ ಗಿರೀಶ್, ದುರ್ಗಾ ಫ್ಯಾವ್ರಿಕೇಷನ್ ನ ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.
ರಸ್ತೆ ಸುರಕ್ಷತಾ ಉಬ್ಬು ದರ್ಪಣವನ್ನು ಒದಗಿಸಿದ ದಿನೇಶ್ ಶೆಟ್ಟಿ ಅವರಿಗೆ ಅಸೋಸಿಯೇಶನ್ ಕೃತಜ್ಞತೆ ಸಲ್ಲಿಸಿದೆ.
