ಕೇಶವ ಶಿಶುಮಂದಿರದ ಮಕ್ಕಳ ಪ್ರವೇಶೋತ್ಸವ ಕಾರ್ಯಕ್ರಮ

ಕಾಟಿಪಳ್ಳ: ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಕಾಟಿಪಳ್ಳ ಇದರ ಆಶ್ರಯದಲ್ಲಿ ಜಾರಂದಾಯ ಕೇಶವ ಶಿಶುಮಂದಿರದ ಮಕ್ಕಳ ಪ್ರವೇಶೋತ್ಸವ ಕಾರ್ಯಕ್ರಮ ಕೇಶವ ಶಿಶುಮಂದಿರದ ಸಾರ್ಥಕ್ಯ ಕಟ್ಟಡದಲ್ಲಿ ಜರುಗಿತು.

ಪೋಲೀಸ್ ಇಲಾಖೆಯ ಎಎಸ್ ಐ ಕುಶಲ ಮಣಿಯಾಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಗುತ್ತಿಗೆದಾರ ನಾಗರಾಜ್ ಕಡಂಬೋಡಿ, ಕೇಶವ ಸನಿಲ್,ಸದಾಶಿವ ಶೆಟ್ಟಿಗಾರ್,ಅಭ್ಯುದಯ ಭಾರತಿ ಸೇವಾ ಟ್ರಸ್ಟ್ ಅಧ್ಯಕ್ಷ ಜಯಕುಮಾರ್,ಹಿಂದು ಧಾರ್ಮಿಕ ಸೇವಾ ಸಮಿತಿ ಅಧ್ಯಕ್ಷ ಹರೀಶ್ ಮುಡಾಯಿಕೋಡಿ, ಕೇಶವ ಶಿಶುಮಂದಿರದ ಕಟ್ಟಡ ಸಮಿತಿ ಅಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ಕೇಶವ ಶಿಶುಮಂದಿರದ ಅಧ್ಯಕ್ಷ ಜಯಶೀಲ ಸೂರಿಂಜೆ, ಸಪ್ನ ಅರ್ ಪಂಡಿತ್, ವಸಂತರಾವ್, ಲೋಕನಾಥ್ ಭಂಡಾರಿ ಮುಂತಾದವರು ಉಪಸ್ಥಿತರಿದ್ದರು.
ದೀಕ್ಷಿತ್ ಸ್ವಾಗತಿಸಿ, ಪ್ರಪುಲ್ಲ ಸುಧಾಕರ್ ಧನ್ಯವಾದ ಸಮರ್ಪಿಸಿ, ಕವಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!