ಟೆಹ್ರಾನ್/ವಾಷಿಂಗ್ಟನ್: ಲೆಬನಾನ್ ಮತ್ತು ಗಾಜಾ ಮೇಲಿನ ಇಸ್ರೇಲ್‌ನ ನಿರಂತರ ಸರಣಿ ದಾಳಿ ಹಾಗೂ ಕದನ ವಿರಾಮ ಉಲ್ಲಂಘನೆಯನ್ನು ಖಂಡಿಸಿ ಇರಾನ್ ಜಾಗತಿಕ ಮಟ್ಟದಲ್ಲಿ ಅತ್ಯಂತ ಸ್ಫೋಟಕ ನಿರ್ಧಾರವೊಂದನ್ನು ಪ್ರಕಟಿಸಿದೆ.

ಅಮೆರಿಕದೊಂದಿಗೆ ಮಧ್ಯಸ್ಥಿಕೆದಾರರ ಮೂಲಕ ನಡೆಯುತ್ತಿದ್ದ ಪರೋಕ್ಷ ಶಾಂತಿ ಮಾತುಕತೆ ಮತ್ತು ಸಂದೇಶ ವಿನಿಮಯವನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಸಂಪೂರ್ಣವಾಗಿ ಸ್ಥಗಿತಗೊಳಿಸಿರುವುದಾಗಿ ಇರಾನ್ ಘೋಷಿಸಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ


ಅಷ್ಟೇ ಅಲ್ಲದೆ, ಇಸ್ರೇಲ್ ಮತ್ತು ಅದರ ಬೆಂಬಲಿಗ ರಾಷ್ಟ್ರಗಳಿಗೆ ತಕ್ಕ ಪಾಠ ಕಲಿಸಲು ಇಡೀ ವಿಶ್ವದ ತೈಲ ಸಾರಿಗೆಯ ಹೆಬ್ಬಾಗಿಲಾಗಿರುವ ʻಹಾರ್ಮುಜ್ ಜಲಸಂಧಿ’ಯನ್ನು (Strait of Hormuz) ಸಂಪೂರ್ಣವಾಗಿ ಬ್ಲಾಕ್ ಮಾಡಲು ಮತ್ತು ಬಾಬ್ ಅಲ್-ಮಂದಬ್ ಜಲಸಂಧಿ ಸೇರಿದಂತೆ ಇತರೆ ಮುಂಭಾಗಗಳಿಂದ ದಾಳಿಯನ್ನು ತೀವ್ರಗೊಳಿಸಲು ಇರಾನ್ ಹಾಗೂ ಅದರ ರೆಸಿಸ್ಟೆನ್ಸ್ ಫ್ರಂಟ್ (ಪ್ರತಿರೋಧ ಒಕ್ಕೂಟ) ನಿರ್ಧರಿಸಿದೆ ಎಂದು ಇರಾನ್‌ನ ತಸ್ನಿಮ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಲೆಬನಾನ್‌ನಲ್ಲಿ ಇಸ್ರೇಲ್ ನಡೆಸುತ್ತಿರುವ ತೀವ್ರ ಆಕ್ರಮಣದ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಗಾಜಾ ಮತ್ತು ಲೆಬನಾನ್‌ನಿಂದ ಇಸ್ರೇಲ್ ಸೇನೆ ಸಂಪೂರ್ಣವಾಗಿ ಹಿಂತೆಗೆಯುವವರೆಗೂ ಯಾವುದೇ ಮಾತುಕತೆ ಸಾಧ್ಯವಿಲ್ಲ ಎಂದು ಇರಾನ್ ನಿಯೋಗ ಸ್ಪಷ್ಟಪಡಿಸಿದೆ.