
ಉಡುಪಿ: ವ್ಯಕ್ತಿಯೋರ್ವರು ರಸ್ತೆ ದಾಟುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟ ಘಟನೆ ಸಾಸ್ತಾನ ಜಂಕ್ಷನ್ ಬಳಿ ಸಂಭವಿಸಿದೆ.

ಸಾಸ್ತಾನ ನಿವಾಸಿ ಗಣೇಶ್ ಕರ್ಕೇರ ಮೃತರು.
ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ
ಗಣೇಶ್ ಮೀನುಗಾರಿಕೆ ಕೆಲಸ ನಿರ್ವಹಿಸುತ್ತಿದ್ದು, ತಡರಾತ್ರಿ ಸಾಸ್ತಾನ ಜಂಕ್ಷನ್‌ನಲ್ಲಿ ಉಡುಪಿ-ಕುಂದಾಪುರ ರಸ್ತೆಯನ್ನು ದಾಟಿ ಪಶ್ಚಿಮ ದಿಕ್ಕಿನ ರಸ್ತೆಯನ್ನು ದಾಟಲು ಡಿವೈಡರ್‌ನ ಅಂಚಿನಲ್ಲಿ ನಿಂತಿದ್ದರು. ಈ ವೇಳೆ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಬರುತ್ತಿದ್ದಂತಹ ಕಾರು ಅವರಿಗೆ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಢಿಕ್ಕಿಯ ರಭಸಕ್ಕೆ ಗಣೇಶ್ ಕರ್ಕೇರ ಅವರು ಸ್ವಲ್ಪ ದೂರು ಕಾರಿನೊಂದಿಗೆ ಎಳೆದೊಯ್ಯಲ್ಪಟ್ಟಿದ್ದು, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.