
ಮಂಗಳೂರು: ಬಿ.ಸಿ.ರೋಡ್ ಸರಕಾರಿ ಬಸ್ ನಿಲ್ದಾಣದಲ್ಲಿ ಕಕ್ಯಪದವು ನಿವಾಸಿ ಲಾವಣ್ಯ ಎಂಬಾಕೆಯನ್ನು ತಲ್ವಾರ್ ನಿಂದ ಕಡಿದು ಹತ್ಯೆಗೈದ ಬೆಳ್ತಂಗಡಿ ಓಡಿಲ್ನಾಳ ನಿವಾಸಿ ಚೇತನ್ ಎಂಬಾತನನ್ನು ಇಂದು ಬೆಳಗ್ಗೆ ಮಂಗಳೂರು ಬಳಿ ಬಂಟ್ವಾಳ ಪೊಲೀಸರು ವಶಕ್ಕೆ ಪಡೆದಿರುವ ಮಾಹಿತಿ ಬಲ್ಲಮೂಲಗಳಿಂದ ಲಭ್ಯವಾಗಿದೆ.

ಆರೋಪಿ ಚೇತನ್ ಏಕಮುಖವಾಗಿ ಲಾವಣ್ಯಳನ್ನು ಪ್ರೀತಿಸುತ್ತಿದ್ದು ಇದನ್ನು ಲಾವಣ್ಯ ನಿರಾಕರಿಸಿದ್ದಳು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ನಿನ್ನೆ ಸಂಜೆ ಬಿ.ಸಿ.ರೋಡ್ ಬಸ್ ನಿಲ್ದಾಣದಲ್ಲಿ ಬಸ್ ನೊಳಗೆ ಕೂತಿದ್ದ ಲಾವಣ್ಯಳನ್ನು ಬಸ್ಸಿಂದ ಇಳಿಸಿ ತಲ್ವಾರ್ ನಿಂದ ಸಾರ್ವಜನಿಕರೆದುರೇ ಹಲ್ಲೆಗೈದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ. ಆರೋಪಿ ಬಂಧನದ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಿದೆ.
