
ವಾಷಿಂಗ್ಟನ್: ಅಮೆರಿಕದಲ್ಲಿ ಖಾಯಂ ನಿವಾಸಿ ಪ್ರಮಾಣಪತ್ರ (ಗ್ರೀನ್‌ಕಾರ್ಡ್) ಪಡೆಯಲು ಅರ್ಜಿ ಸಲ್ಲಿಸುವವರು ತಮ್ಮ ಮಾತೃದೇಶಗಳಿಗೆ ಹಿಂತಿರುಗಿ ಅಲ್ಲಿಂದಲೇ ಅಮೆರಿಕ ಕಾನ್ಸುಲೆಟ್ ಕಚೇರಿ ಮೂಲಕ ಅರ್ಜಿ ಸಲ್ಲಿಸಬೇಕು ಅಂತ ಅಮೆರಿಕ ಪೌರತ್ವ ಮತ್ತು ವಲಸೆ ವಿಭಾಗವು ಆದೇಶ ಹೊರಡಿಸಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ
ಎಚ್1ಬಿ ವೀಸಾ, ಎಲ್1 ವೀಸಾ ಹಾಗೂ ವಿದ್ಯಾರ್ಥಿ ವೀಸಾದಡಿ ಅಮೆರಿಕಕ್ಕೆ ಹೋಗಿದ್ದವರು ಅಲ್ಲಿಯೇ ಉಳಿದುಕೊಂಡು ಗ್ರೀನ್‌ಕಾರ್ಡ್ ಅರ್ಜಿ ಸಲ್ಲಿಸಬಹುದಿತ್ತು. ಇದೀಗ ಮಾತೃದೇಶಗಳಿಗೆ ತೆರಳಿ ಅಲ್ಲಿಂದ ಅರ್ಜಿ ಸಲ್ಲಿಸಬೇಕಿದೆ. ತಾತ್ಕಾಲಿಕ ವೀಸಾದಲ್ಲಿರುವವರು, ಅಕ್ರಮವಾಗಿ ವಾಸಿಸುತ್ತಿರುವವರು, ಗಂಡ/ಹೆಂಡತಿ ಅಥವಾ ಮಕ್ಕಳ ಪ್ರಾಯೋಜಕತ್ವ ಮೂಲಕ ಕಾನೂನುಬದ್ಧ ವಲಸಿಗ ಸ್ಥಾನ ಪಡೆಯಲು ಪ್ರಯತ್ನಿಸುತ್ತಿರುವವರು ಈ ನಿಯಮದನ್ವಯ ದೇಶ ತೊರೆಯಬೇಕಿದೆ.
