
ಬಂಟ್ವಾಳ: ಗುರುವಾರ ಸಂಜೆ ಇಲ್ಲಿನ ಸರಕಾರಿ ಬಸ್ ನಿಲ್ದಾಣದಲ್ಲಿ ನಡೆದ ಯುವತಿಯ ಹತ್ಯೆಯ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಂಟ್ವಾಳ ತಾಲೂಕು ಕಕ್ಯಪದವು ನಿವಾಸಿ ಬಾಲಕೃಷ್ಣ ಗೌಡರ ಪುತ್ರಿ ಲಾವಣ್ಯ(24)ಳನ್ನು ಯುವಕ ತಲ್ವಾರ್ ನಿಂದ ಯದ್ವಾತದ್ವಾ ಕಡಿದು ಕೊಲೆಗೈಯುತ್ತಿರುವ ಮತ್ತು ತಲ್ವಾರ್ ಎಸೆದು ಅಲ್ಲಿಂದ ಬಸ್ ನಿಲ್ದಾಣದ ಕಡೆಗೆ ಓಡಿ ಪರಾರಿಯಾಗುತ್ತಿರುವ ವಿಡಿಯೋವನ್ನು ಸೆರೆಹಿಡಿಯಲಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಆರೋಪಿಯು ಚೇತನ್ ಎಂಬುದಾಗಿ ತಿಳಿದುಬಂದಿದ್ದು, ಈತನು ಯುವತಿಯ ದೂರದ ಸಂಬಂಧಿ ಹಾಗೂ ಯುವತಿಯನ್ನು ಏಕಪಕ್ಷೀಯ ಪ್ರೀತಿಸುತ್ತಿದ್ದ ಎಂದು ಹೇಳಲಾಗಿದೆ. ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.