ಬಾಯಲ್ಲಿ ನೀರೂರಿಸುವ ಬದನೆಕಾಯಿ ಎಣ್ಣೆಗಾಯಿ ಪಲ್ಯ ಮಾಡೋದು ಹೇಗೆ? ಇಲ್ಲಿದೆ ನೋಡಿ…

ಉತ್ತರ ಕರ್ನಾಟಕದ ಅಡುಗೆ ಎಂದಾಕ್ಷಣ ನೆನಪಾಗುವುದೇ ಮಸಾಲೆ ಭರಿತ ಖಾರ ಮತ್ತು ಅದ್ಭುತ ರುಚಿ. ಅಂತಹದ್ದೇ ವಿಶೇಷ ಖಾದ್ಯವೆಂದರೆ ಬದನೆಕಾಯಿ ಎಣ್ಣೆಗಾಯಿ ಪಲ್ಯ. ರೊಟ್ಟಿ, ಜೋಳದ ರೊಟ್ಟಿ ಅಥವಾ ಚಪಾತಿ ಜೊತೆಗೆ ಈ ಪಲ್ಯ ಇದ್ದರಂತೂ ಊಟದ ಮಜಾನೇ ಬೇರೆ.

ಬಾಯಲ್ಲಿ ನೀರೂರಿಸುವ ಈ ಸಾಂಪ್ರದಾಯಿಕ ಖಾದ್ಯವನ್ನು ತಯಾರಿಸುವ ಸುಲಭ ವಿಧಾನ ಇಲ್ಲಿದೆ ನೋಡಿ…

ಬೇಕಾಗುವ ಸಾಮಗ್ರಿಗಳು:

ಬಿಳಿ ಎಳ್ಳು, ಶೇಂಗಾ, ಒಣಕೊಬ್ಬರಿ ತುರಿ

ಬದನೆಕಾಯಿ, ಈರುಳ್ಳಿ, ಶುಂಠಿ, ಬೆಳ್ಳುಳ್ಳಿ

ಲವಂಗ, ಚಕ್ಕೆ, ಕರಿಬೇವು

ಅರಿಶಿಣ ಪುಡಿ, ಅಚ್ಚಖಾರದ ಪುಡಿ, ಧನಿಯಾ ಪುಡಿ

ಬೆಲ್ಲ, ಹುಣಸೆಹಣ್ಣಿನ ರಸ, ಉಪ್ಪು, ಎಣ್ಣೆ

ಸಾಸಿವೆ, ಒಣಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು

ಎಣ್ಣೆಗಾಯಿ ಪಲ್ಯ ರೆಸಿಪಿ | ಸ್ಟಫ್ಡ್ ಬದನೆಕಾಯಿ ಮಾಡುವ ವಿಧಾನ | ಬದನೆಕಾಯಿ ಎಣ್ಣೆಗಾಯಿ |  ಕರ್ನಾಟಕ ಶೈಲಿಯ ತುಂಬಿದ ಬದನೆಕಾಯಿ

ತಯಾರಿಸುವ ವಿಧಾನ:

ಮೊದಲು ಬಿಸಿ ತವೆಗೆ ಶೇಂಗಾ ಹಾಕಿ ಹುರಿದು, ಅದೇ ತವೆಯಲ್ಲಿ ಬಿಳಿ ಎಳ್ಳು ಬಣ್ಣ ಬದಲಾಗುವವರೆಗೆ ಹುರಿಯಿರಿ. ನಂತರ ಒಣಕೊಬ್ಬರಿ ತುರಿಯನ್ನು ಹಸಿ ವಾಸನೆ ಹೋಗುವವರೆಗೆ ಹುರಿದು, ಮೂರನ್ನೂ ಮಿಕ್ಸಿ ಜಾರ್‌ಗೆ ಹಾಕಿ ಪುಡಿ ಮಾಡಿಟ್ಟುಕೊಳ್ಳಿ.

ಒಂದು ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿಯನ್ನು ಹಾಕಿ, ನಂತರ ಅದಕ್ಕೆ ಶುಂಠಿ, ಬೆಳ್ಳುಳ್ಳಿ, ಲವಂಗ, ಚಕ್ಕೆ ಮತ್ತು ಕರಿಬೇವು ಸೇರಿಸಿ 2 ನಿಮಿಷ ಹುರಿಯಿರಿ. ಈ ಹುರಿದ ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿ, ಅದರ ಜೊತೆಗೆ ಅರಿಶಿಣ, ಖಾರದಪುಡಿ, ಧನಿಯಾ ಪುಡಿ, ಬೆಲ್ಲ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ನೀರನ್ನು ಸೇರಿಸದೇ ಹುಣಸೆಹಣ್ಣಿನ ರಸವನ್ನು ಹಾಕಿ ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ.

ಒಂದು ಬಾಣಲೆಗೆ ಒಂದು ಚಮಚ ಎಣ್ಣೆ ಹಾಕಿ, ಹೆಚ್ಚಿದ ಈರುಳ್ಳಿ, ಶುಂಠಿ, ಬೆಳ್ಳುಳ್ಳಿ, ಲವಂಗ, ಚಕ್ಕೆ, ಕರಿಬೇವು ಸೇರಿಸಿ 2 ನಿಮಿಷ ಹುರಿಯಿರಿ. ಈ ಮಿಶ್ರಣವನ್ನು ಮಿಕ್ಸಿ ಜಾರ್‌ಗೆ ಹಾಕಿ, ಅರಿಶಿಣ, ಖಾರದಪುಡಿ, ಧನಿಯಾಪುಡಿ, ಬೆಲ್ಲ, ಉಪ್ಪು ಸೇರಿಸಿ. ನೀರು ಸೇರಿಸದೇ ಹುಣಸೆಹಣ್ಣಿನ ರಸ ಹಾಕಿ ನುಣ್ಣಗೆ ಪೇಸ್ಟ್ ಮಾಡಿ.

ಈಗ ರುಬ್ಬಿದ ಮಸಾಲೆ ಮತ್ತು ಒಣ ಮಸಾಲೆ ಪುಡಿಯನ್ನು ಒಟ್ಟಿಗೆ ಮಿಕ್ಸ್ ಮಾಡಿ. ಬದನೆಕಾಯಿಯನ್ನು ನಾಲ್ಕು ಭಾಗವಾಗಿ ಸೀಳಿ ಉಪ್ಪು ನೀರಿನಲ್ಲಿಡಿ. ಬಳಿಕ ನೀರು ಸೋಸಿ, ಸಿದ್ಧಪಡಿಸಿದ ಮಸಾಲೆಯನ್ನು ಒಳಗೆ ತುಂಬಿಸಿ ಉಳಿದ ಮಸಾಲೆಯನ್ನು ಹಾಗೇ ಇಟ್ಟುಕೊಳ್ಳಿ.

ಬಾಣಲೆಯಲ್ಲಿ ಎಣ್ಣೆ ಹಾಕಿ, ಸಾಸಿವೆ, ಒಣಮೆಣಸಿನಕಾಯಿ ಒಗ್ಗರಣೆ ಕೊಡಿ. ಮಸಾಲೆ ತುಂಬಿದ ಬದನೆಕಾಯಿಗಳನ್ನು ಹಾಕಿ, ಸ್ವಲ್ಪ ಸಮಯ ಬಳಿಕ ಉಳಿದ ಮಸಾಲೆ ಪೇಸ್ಟ್ ಮತ್ತು ಒಂದು ಕಪ್ ನೀರು ಸೇರಿಸಿ, ಮುಚ್ಚಿ ಸಣ್ಣ ಉರಿಯಲ್ಲಿ ಬೇಯಲು ಬಿಡಿ.

ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಉದುರಿಸಿದರೆ, ಬಿಸಿಬಿಸಿ ಜೋಳದ ರೊಟ್ಟಿ, ಚಪಾತಿ ಅಥವಾ ಅನ್ನದ ಜೊತೆ ಸವಿಯಲು ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಎಣ್ಣೆಗಾಯಿ ಪಲ್ಯ ಸಿದ್ಧ!

error: Content is protected !!