ಸಿಲಿಂಡರ್ ಸ್ಫೋಟ: ಯುವತಿ ದೇಹ ಸುಟ್ಟು ಹೋಗಿದ್ದರೂ ಆಕೆಯೇ ಬೇಕೆಂದು ಮದುವೆಯಾದ ವರ

ಕಾನ್ಪುರ: ಹಳದಿ ಶಾಸ್ತ್ರದ ವೇಳೆ ಸಂಭವಿಸಿದ ಗ್ಯಾಸ್ ಸಿಲಿಂಡರ್ ಸ್ಫೋಟದಲ್ಲಿ ಯುವತಿ ದೇಹ ಸುಟ್ಟು ಹೋಗಿದ್ದರೂ, ವರ ಆಕೆಯೇ ಬೇಕೆಂದು ಹಠ ತೊಟ್ಟು ಮದುವೆಯಾಗಿರುವ ಘಟನೆ ಕಾನ್ಪುರದಲ್ಲಿ ನಡೆದಿದೆ.

ಮದುವೆಯ ಮುನ್ನಾದಿನದ ಹಳದಿ ಶಾಸ್ತ್ರದ ಸಂಭ್ರಮದಲ್ಲಿದ್ದಾಗ, ದಿಢೀರನೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ವಧು ಸೇರಿದಂತೆ ಹಲವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದರು. ದೇಹ ಸುಟ್ಟುಹೋಗಿದ್ದರಿಂದ ವಧುವಿನ ಕುಟುಂಬಸ್ಥರು ಮದುವೆ ಮುರಿದುಬೀಳಬಹುದು ಎಂಬ ಆತಂಕದಲ್ಲಿದ್ದರು.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ


ಆದರೆ, ಕಷ್ಟದ ಸಮಯದಲ್ಲಿ ಕೈಬಿಡದ ವರ, ರೂಪಕ್ಕಿಂತ ಗುಣವೇ ಮುಖ್ಯ ಎಂದು ಆಸ್ಪತ್ರೆಯಲ್ಲೇ ಆಕೆಯ ಕೈ ಹಿಡಿದು ಮದುವೆಯಾಗಿದ್ದಾನೆ.

error: Content is protected !!