ವಿನೇಶ್ ಫೋಗಟ್‌ಗೆ 2026ರ ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಸುಪ್ರೀಂ ಅನುಮತಿ!!

ನಾವು ತಡೆಯುವುದಿಲ್ಲ: ಏಷ್ಯನ್ ಗೇಮ್ಸ್‌ ಟ್ರಯಲ್ಸ್‌ನಲ್ಲಿ ಭಾಗವಹಿಸಲು ವಿನೇಶ್ ಫೋಗಟ್‌ಗೆ ಸುಪ್ರೀಂ ಕೋರ್ಟ್ ಅನುಮತಿ

ಹೊಸದಿಲ್ಲಿ: 2026ರ ಏಷ್ಯನ್ ಕ್ರೀಡಾಕೂಟದ ಸೆಲೆಕ್ಸನ್ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಒಲಂಪಿಯನ್ ಕುಸ್ತಿಪಟು ವಿನೇಶ್ ಫೋಗಟ್ ಅವರಿಗೆ ಸುಪ್ರೀಂ ಕೋರ್ಟ್ ಇಂದು(ಮೇ 29) ಅನುಮತಿ ನೀಡಿದೆ.

ಫೋಗಟ್​ಗೆ ಟ್ರಯಲ್ಸ್‌ನಲ್ಲಿ ಭಾಗವಹಿಸಲು ಅನುಮತಿ ನೀಡಿದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಭಾರತೀಯ ಕುಸ್ತಿ ಒಕ್ಕೂಟ ಸುಪ್ರೀಂ ಮೆಟ್ಟಿಲೇರಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಪಿ.ಎಸ್. ನರಸಿಂಹ ಮತ್ತು ಅಲೋಕ್ ಆರಾಧೆ ಅವರ ಪೀಠವು, ಹೈಕೋರ್ಟ್ ಈ ವಿಷಯವನ್ನು ಪರಿಶೀಲಿಸಿದ ರೀತಿಯ ಬಗ್ಗೆ ಎಸ್‌ಸಿ ಕಳವಳ ವ್ಯಕ್ತಪಡಿಸಿತು. ಮತ್ತು ಕೊನೆಯ ಕ್ಷಣದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿತು.

ಮುಂದುವರೆದು ಕುಸ್ತಿಯಲ್ಲಿನ ತನ್ನ ಸಾಧನೆಗಳ ಮೂಲಕ ಅವರು ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂಬುದನ್ನು ಗಮನಿಸಿದ ಸುಪ್ರೀಂ, ಬೇರೆ ಯಾರಾದರೂ ಆಗಿದ್ದರೆ, ಅದು ಬೇರೆಯದೇ ರೀತಿಯಲ್ಲಿರುತ್ತಿತ್ತು. ಅವರು ದೇಶಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಹೇಳಿ, ಹೈಕೋರ್ಟ್​ ಆದೇಶದಲ್ಲಿ ಹಸ್ತಕ್ಷೇಪ ಮಾಡಲು ನಿರಾಕರಿಸಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

ತಾಯ್ತನದ ಕಾರಣ ನೀಡಿ ಏಷ್ಯನ್ ಗೇಮ್ಸ್​​ನ ಟ್ರಯಲ್ಸ್​ನಲ್ಲಿ ವಿನೇಶ್​​ ಫೋಗಟ್​​ಗೆ ಭಾಗವಹಿಸಲು WFI ಅವಕಾಶ ನಿರಾಕರಿಸಿತ್ತು. ಅದನ್ನ ಪ್ರಶ್ನಿಸಿ ಫೋಗಟ್ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ್ದ ಹೈಕೋರ್ಟ್, ತಾಯ್ತನವನ್ನು ಅಂಗವೈಕಲ್ಯ ಅಥವಾ ವೃತ್ತಿಪರ ಅವಕಾಶಗಳಿಂದ ಹೊರಗಿಡುವ ಆಧಾರವಾಗಿ ಪರಿಗಣಿಸಲಾಗುವುದಿಲ್ಲ ಎಂದು ತೀರ್ಪು ನೀಡಿ, ಟ್ರಯಲ್ಸ್​ನಲ್ಲಿ ಭಾಗವಹಿಸಲು ಅವಕಾಶ ನೀಡುವಂತೆ ನಿರ್ದೇಶನ ನೀಡಿತ್ತು

error: Content is protected !!