ರಹಸ್ಯ ಬಾಣ ಪ್ರಯೋಗಿಸಿ ಅಮೇರಿಕಾದ ರೂ. 250 ಕೋಟಿಯ ʻಎಂಕ್ಯೂ-9 ರೀಪರ್’ ಹೊಡೆದುರುಳಿಸಿದ ಇರಾನ್

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಿಚ್ಚು ಮುಂದುವರಿದಿರುವ ಬೆನ್ನಲ್ಲೇ ಇರಾನ್ ಸೈನ್ಯ ಅಮೆರಿಕಾಗೆ ಚೇತರಿಸಿಕೊಳ್ಳಲಾಗದ ಬಿಗ್ ಶಾಕ್ ನೀಡಿದೆ. ಜಾಗತಿಕ ಇಂಧನ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿಯ ಬಳಿ ಹಾರಾಡುತ್ತಿದ್ದ ಅಮೆರಿಕಾದ ಅತ್ಯಂತ ಸುಧಾರಿತ ಮತ್ತು ಭಾರಿ ಪ್ರಸಿದ್ಧ ‘ಎಂಕ್ಯೂ-9 ರೀಪರ್’ (MQ-9 Reaper) ಕಣ್ಗಾವಲು ಡ್ರೋನ್ ಅನ್ನು ಇರಾನ್ ಹೊಡೆದುರುಳಿಸಿದೆ. ಈ ಒಂದು ಡ್ರೋನ್‌ನ ಮೌಲ್ಯ ಬರೋಬ್ಬರಿ ೧೩೦ ಕೋಟಿಯಿಂದ 250 ಕೋಟಿ ರೂಪಾಯಿ ($16 Million to $30 Million) ಎನ್ನಲಾಗಿದೆ.

ಇರಾನ್‌ನ ಪೌರಾಣಿಕ ಬಿಲ್ಗಾರ ʻಅರಾಶ್’ ನೆನಪಿನಲ್ಲಿ ಕರೆಯಲಾಗುವ ʻಅರಾಶ್-ಇ-ಕಮಾಂಗಿರ್’ (Arash-e-Kamangir) ಎಂಬ ಸಂಪೂರ್ಣ ದೇಶೀಯವಾಗಿ ತಯಾರಾದ ನೂತನ ವಾಯು ರಕ್ಷಣಾ ವ್ಯವಸ್ಥೆಯನ್ನು ಈ ದಾಳಿಗೆ ಮೊದಲ ಬಾರಿಗೆ ಬಳಸಲಾಗಿದೆ. ಕೇಶ್ಮ್ (Qeshm) ದ್ವೀಪದ ಬಳಿ ಇರಾನ್‌ನ ವಾಯು ಗಡಿಯನ್ನು ರಕ್ಷಿಸುವ ಕಾರ್ಯಾಚರಣೆಯ ವೇಳೆ ಈ ರಹಸ್ಯ ಅಸ್ತ್ರ ಅಮೆರಿಕಾದ ಹೈಟೆಕ್ ಡ್ರೋನ್ ಅನ್ನು ಹೊಡೆದುರುಳಿಸಿದೆ ಎಂದು ಇರಾನ್‌ನ ಫಾರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

ನಿಮ್ಮ ಮನೆ/ಆಸ್ತಿ ಮಾರಾಟ ಮತ್ತು ಖರೀದಿಗೆ ಇಲ್ಲಿದೆ ಸುವರ್ಣ ಅವಕಾಶ! ಈಗಲೇ ಈ ಲಿಂಕ್ ಕ್ಲಿಕ್ ಮಾಡಿ ಗುಂಪಿಗೆ ಸೇರಿಕೊಳ್ಳಿ

.

 

ದೊಡ್ಡ ದೊಡ್ಡ ರೇಡಾರ್ ಕೇಂದ್ರಗಳಿಲ್ಲದೆ, ವಾಹನಗಳ ಮೇಲೆ ಎಲ್ಲಿಗೆ ಬೇಕಾದರೂ ಸಾಗಿಸಬಹುದಾದ (Mobile SAM) ಅತ್ಯಂತ ಅಗ್ಗದ ತಂತ್ರಜ್ಞಾನವನ್ನು ಇರಾನ್ ಬಳಸುತ್ತಿದೆ. ಲಂಡನ್‌ನ ಕಿಂಗ್ಸ್ ಕಾಲೇಜ್‌ನ ರಕ್ಷಣಾ ತಜ್ಞ ಮಾರ್ಕ್ ಹಿಲ್ಬೋರ್ನ್ ಪ್ರಕಾರ, ಇರಾನ್ ಅತ್ಯಂತ ಕಡಿಮೆ ವೆಚ್ಚದ ವ್ಯವಸ್ಥೆಗಳ ಮೂಲಕ ಶತ್ರುಗಳ ಬಿಲಿಯನ್ ಡಾಲರ್ ಮೌಲ್ಯದ ಸಂಕೀರ್ಣ ಯುದ್ಧ ವಿಮಾನಗಳನ್ನು ಹೊಡೆದುರುಳಿಸುವ ಮೂಲಕ ʻಯುದ್ಧದ ಆರ್ಥಿಕತೆ’ಯನ್ನೇ (Economics of Warfare) ಬದಲಾಯಿಸುತ್ತಿದೆ.

ಈ ಹೊಸ ವ್ಯವಸ್ಥೆಯು ಸಾಂಪ್ರದಾಯಿಕ ರೇಡಾರ್‌ಗಳ ಬದಲಾಗಿ ಶಾಖವನ್ನು ಪತ್ತೆಹಚ್ಚುವ (Heat-seeking) ಅಥವಾ ಎಲೆಕ್ಟ್ರೋ-ಆಪ್ಟಿಕಲ್ ತಂತ್ರಜ್ಞಾನದ ಮೂಲಕ ಕೆಲಸ ಮಾಡುತ್ತದೆ. ಇರಾನ್‌ನ ಈ ಕ್ಷಿಪಣಿಗಳು ಆಕಾಶದಲ್ಲಿ ಹಾರಾಡುತ್ತಾ ಶತ್ರುಗಳ ಡ್ರೋನ್‌ಗಳು ಕಾಣಿಸಿಕೊಳ್ಳುವವರೆಗೆ ಹೊಂಚು ಹಾಕಿ ಕಾಯಬಲ್ಲವು. ಅಮೆರಿಕಾದ ರೀಪರ್ ಡ್ರೋನ್‌ಗಳು ನಿಧಾನವಾಗಿ ಚಲಿಸುವುದರಿಂದ ಇರಾನ್‌ನ ಈ ಮೊಬೈಲ್ ಅಸ್ತ್ರಕ್ಕೆ ಸುಲಭವಾಗಿ ಬಲಿಯಾಗಿವೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ತಿಂಗಳುಗಳಿಂದ ಯುದ್ಧ ನಡೆಯುತ್ತಿದ್ದರೂ, ಅಮೆರಿಕಾ ಮತ್ತು ಇಸ್ರೇಲ್‌ನ ಆಧುನಿಕ ದಾಳಿಗಳನ್ನು ಧೂಳೀಪಟ ಮಾಡುವ ಮಿಲಿಟರಿ ಸಾಮರ್ಥ್ಯವನ್ನು ತಾನು ಇಂದಿಗೂ ಉಳಿಸಿಕೊಂಡಿದ್ದೇನೆ ಎಂಬುದನ್ನು ಇರಾನ್ ಈ ಮೂಲಕ ಜಗತ್ತಿಗೆ ಸಾರಿದೆ. ಇರಾನ್‌ನ ಈ ದಾಳಿ ಮತ್ತು ಹೊಸ ರಕ್ಷಣಾ ವ್ಯವಸ್ಥೆಯ ಸತ್ಯಾಸತ್ಯತೆಯನ್ನು ಅಂತರರಾಷ್ಟ್ರೀಯ ಮೂಲಗಳು ಇನ್ನು ಅಧಿಕೃತವಾಗಿ ಖಚಿತಪಡಿಸಬೇಕಿದೆ.

error: Content is protected !!