ಲವ್ ಮ್ಯಾರೇಜ್: ಯುವತಿ ವಿಷ ಕುಡಿದು ಆತ್ಮಹತ್ಯೆ!

ನೆಲಮಂಗಲ: ಇಲ್ಲಿನ ಬಸವನಹಳ್ಳಿಯಲ್ಲಿ ಘಟನೆ ನಡೆದಿದ್ದು ತನುಜ(31) ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರವೀಂದ್ರ ಜೊತೆ ಧರ್ಮಸ್ಥಳದಲ್ಲಿ ಮದುವೆಯಾಗಿದ್ದ ತನುಜಾಳನ್ನು ಸಲ್ಪ ಸಮಯ ಕಳೆಯಲಿ ಮನೆಯಲ್ಲಿ ಹೇಳ್ತೇನೆ ಎಂದು ರವೀಂದ್ರ ಪಿಜಿಯಲ್ಲಿ ಇರಿಸಿದ್ದ.
ಯಲಹಂಕದ ಸಿಂಗಾಪುರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ತನುಜಾ ನಿನ್ನೆ ಪೋನ್ ಮಾಡಿ ಮನೆಗೆ ಬಾ ಎಂದಿದ್ದಳು.
ಆದರೆ ರವೀಂದ್ರ ಬೆಳಿಗ್ಗೆ ಬರ್ತೇನೆ ಇವಾಗ ಆಗಲ್ಲ ಎಂದಿದ್ದ. ಇದ್ರಿಂದ ಸಿಟ್ಟಾಗಿದ್ದ ತನುಜಾ ಪೋನ್ ಸ್ವಿಚ್ಡ್ ಆಫ್ ಮಾಡಿದ್ದಳು.


10 ಗಂಟೆಗೆ ವಿಷ ಕುಡಿದಿದ್ದೇನೆ ಎಂದು ರವೀಂದ್ರನಿಗೆ ಮೆಸೆಜ್ ಮಾಡಿ ನೆಲಮಂಗಲ ಬಸವನಹಳ್ಳಿಯಲ್ಲಿ ಕುಳಿತಿರುವುದಾಗಿ ಹೇಳಿಕೆ ಸ್ಥಳಕ್ಕೆ ರವೀಂದ್ರ ಬಂದು ನೋಡಿ ಕೂಡಲೇ ಆಸ್ಪತ್ರೆಗೆ ಶಿಫ್ಟ್. ಅಷ್ಟರಲ್ಲಾಗಲೇ ಸಾವನ್ನಪ್ಪಿದ್ದ ತನುಜಾ ಘಟನೆ ಸಂಬಂಧ ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!