ಟೆಹ್ರಾನ್: ಒಂದೆಡೆ ಯುದ್ಧ ನಿಲ್ಲಿಸಲು ಕತಾರ್ ರಾಜಧಾನಿ ದೋಹಾದಲ್ಲಿ ಜಾಗತಿಕ ಮಟ್ಟದ ಶಾಂತಿ ಮಾತುಕತೆಗಳು ನಡೆಯುತ್ತಿದ್ದರೆ, ಇನ್ನೊಂದೆಡೆ ಅಮೆರಿಕ ತನ್ನ ಎಂದಿನ ರಕ್ತಪಿಪಾಸು ಬುದ್ಧಿಯನ್ನು ಮತ್ತೆ ಪ್ರದರ್ಶಿಸಿದೆ! ಮೂರು ತಿಂಗಳಿನಿಂದ ಜಗತ್ತನ್ನೇ ನಡುಗಿಸುತ್ತಿರುವ ಇರಾನ್-ಅಮೆರಿಕ-ಇಸ್ರೇಲ್ ಮಹಾಯುದ್ಧಕ್ಕೆ ಬ್ರೇಕ್ ಹಾಕಲು ಇರಾನ್ ರಾಜತಾಂತ್ರಿಕರು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿರುವಾಗಲೇ, ಅಮೆರಿಕ ಸೇನೆ ದಕ್ಷಿಣ ಇರಾನ್ ಮೇಲೆ ಹಠಾತ್ ವಾಯುದಾಳಿ ನಡೆಸಿ ಜಗತ್ತಿನ ಆಕ್ರೋಶಕ್ಕೆ ಕಾರಣವಾಗಿದೆ.

ತನ್ನ ಈ ನರಿಬುದ್ಧಿಯ ದಾಳಿಗೆ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಎಂದಿನಂತೆ ‘ಆತ್ಮರಕ್ಷಣೆ’ಯ ಬಣ್ಣ ಬಳಿದುಕೊಂಡಿದೆ. ತನ್ನ ಸೈನಿಕರನ್ನು ರಕ್ಷಿಸಲು ಮತ್ತು ಇರಾನ್ ಕ್ಷಿಪಣಿ ನೆಲೆಗಳು ಹಾಗೂ ಪರ್ಷಿಯನ್ ಕೊಲ್ಲಿಯಲ್ಲಿ ಮೈನ್‌ಗಳನ್ನು (ಸಮುದ್ರ ಬಾಂಬ್) ಇಡುತ್ತಿದ್ದ ದೋಣಿಗಳನ್ನು ಗುರಿಯಾಗಿಸಿ ಈ ದಾಳಿ ನಡೆಸಲಾಗಿದೆ ಎಂದು ವಾಷಿಂಗ್ಟನ್ ಉದ್ಧಟತನದ ಹೇಳಿಕೆ ನೀಡಿದೆ. ಕದನ ವಿರಾಮ ಜಾರಿಯಲ್ಲಿದ್ದರೂ ಅಮೆರಿಕ ಮಾತ್ರ ಸಂಯಮದ ಹೆಸರಿನಲ್ಲಿ ಇರಾನ್‌ನ ಸಾರ್ವಭೌಮತ್ವದ ಮೇಲೆ ಸವಾರಿ ಮಾಡುತ್ತಿರುವುದು ಸ್ಪಷ್ಟವಾಗಿದೆ.

ಇರಾನ್‌ನ ಅತ್ಯಂತ ಆಯಕಟ್ಟಿನ ಪ್ರದೇಶವಾದ ಹರ್ಮುಜ್ ಜಲಸಂಧಿಯ ಬಳಿಯ ಬಂದರ್ ಅಬ್ಬಾಸ್ ನೌಕಾನೆಲೆ ಹಾಗೂ ವಿಮಾನ ನಿಲ್ದಾಣದ ಬಳಿ ಭೀಕರ ಸ್ಫೋಟದ ಸದ್ದುಗಳು ಕೇಳಿಬಂದಿವೆ. ಆದರೆ, ಅಮೆರಿಕದ ಈ ದುಸ್ಸಾಹಸಕ್ಕೆ ಇರಾನ್ ಸುಮ್ಮನೆ ಕೂತಿಲ್ಲ. ಶತ್ರುಗಳ ದಾಳಿಯನ್ನು ತಡೆದು ಧೂಳೀಪಟ ಮಾಡಲು ಬಂದರ್ ಅಬ್ಬಾಸ್‌ನಲ್ಲಿ ಇರಾನ್‌ನ ಅತ್ಯಾಧುನಿಕ ವಾಯು ರಕ್ಷಣಾ ವ್ಯವಸ್ಥೆ (Air Defence System) ತಕ್ಷಣವೇ ಕಾರ್ಯಪ್ರವೃತ್ತವಾಗಿದ್ದು, ತಕ್ಕ ಪ್ರತ್ಯುತ್ತರ ನೀಡಿದೆ. ಸಿರಿಕ್ ಮತ್ತು ಜಾಸ್ಕ್ ಬಳಿಯ ಪರ್ಷಿಯನ್ ಕೊಲ್ಲಿಯಲ್ಲೂ ಶತ್ರುಗಳ ಡ್ರೋನ್‌ಗಳನ್ನು ಇರಾನ್ ಸೈನ್ಯ ಹೊಡೆದುರುಳಿಸಿದೆ!

“ಶರಣಾಗತಿಯ ಪ್ರಶ್ನೆಯೇ ಇಲ್ಲ”
ಅಮೆರಿಕದ ಈ ಹೊಸ ಆಕ್ರಮಣಕ್ಕೆ ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಹಾಗೂ ಸುಪ್ರೀಂ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್‌ನ ನೂತನ ಕಠಿಣ ನಿಲುವಿನ ನಾಯಕ ಮೊಹಮ್ಮದ್ ಬಾಗೇರ್ ಜೊಲ್ಘಾದರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಅಮೆರಿಕ ಮತ್ತು ಇಸ್ರೇಲ್ ವಿರುದ್ಧದ ಹೋರಾಟದಲ್ಲಿ ಇರಾನ್ ಒಂದು ಹೆಜ್ಜೆಯೂ ಹಿಂದೆ ಇಡುವುದಿಲ್ಲ. ನಮ್ಮ ಮಿಲಿಟರಿ ಬಲ ಮತ್ತು ಜನರ ಧೀಮಂತ ಪ್ರತಿರೋಧ ಶತ್ರುವನ್ನು ಈಗಾಗಲೇ ಮಂಡಿಯೂರುವಂತೆ ಮಾಡಿದೆ” ಎಂದು ಗುಡುಗಿದ್ದಾರೆ.

ಯುರೇನಿಯಂ ಒಪ್ಪಿಸಲು ತಾಕೀತು!
ದಾಳಿ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತನ್ನ ಎಂದಿನ ಬೆದರಿಕೆ ತಂತ್ರವನ್ನು ಮುಂದುವರಿಸಿದ್ದು, ಇರಾನ್ ತನ್ನ ಇಡೀ ಯುರೇನಿಯಂ ಸಾಂದ್ರತೆಯ ದಾಸ್ತಾನನ್ನು (Nuclear Dust!) ತಕ್ಷಣವೇ ಅಮೆರಿಕಕ್ಕೆ ಒಪ್ಪಿಸಬೇಕು ಅಥವಾ ಅಂತಾರಾಷ್ಟ್ರೀಯ ಸಾಕ್ಷಿಗಳ ಸಮ್ಮುಖದಲ್ಲಿ ನಾಶಪಡಿಸಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿಹಾಯ್ದಿದ್ದಾರೆ. ಅಷ್ಟೇ ಅಲ್ಲದೆ, ಸೌದಿ ಅರೇಬಿಯಾ, ಕತಾರ್, ಪಾಕಿಸ್ತಾನ ಸೇರಿದಂತೆ ಮಧ್ಯಪ್ರಾಚ್ಯದ ಪ್ರಮುಖ ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ಪರವಾಗಿರುವ ‘ಅಬ್ರಹಾಂ ಅಕಾರ್ಡ್ಸ್’ ಒಪ್ಪಂದಕ್ಕೆ ಸಹಿ ಹಾಕಲೇಬೇಕು ಎಂದು ಹಠ ಹಿಡಿದಿದ್ದಾರೆ.

ಪ್ಯಾಲೇಸ್ಟಿನಿಯನ್ ನಿರಪರಾಧಿಗಳ ಮಾರಣಹೋಮ ನಡೆಸುತ್ತಿರುವ ಇಸ್ರೇಲ್ ಜೊತೆ ಯಾವುದೇ ಸ್ವತಂತ್ರ ಪ್ಯಾಲೇಸ್ಟೈನ್ ರಾಷ್ಟ್ರ ರಚನೆಯಾಗದೆ ಹಸ್ತಲಾಘವ ಮಾಡಲು ಸೌದಿ ಅರೇಬಿಯಾ ಮತ್ತು ಕತಾರ್ ನೇರವಾಗಿಯೇ ನಿರಾಕರಿಸಿವೆ. ಶಾಂತಿ ಒಪ್ಪಂದ ನೆಪ ಮಾತ್ರ, ಇಡೀ ಮಧ್ಯಪ್ರಾಚ್ಯವನ್ನು ತನ್ನ ಕಾಲಡಿ ಇಟ್ಟುಕೊಳ್ಳುವ ಅಮೆರಿಕದ ಈ ಸಾಮ್ರಾಜ್ಯಶಾಹಿ ದರ್ಪಕ್ಕೆ ಇರಾನ್ ತಕ್ಕ ಪಾಠ ಕಲಿಸಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
