
ಬೀಜಿಂಗ್: ಶಾಂಕ್ಸಿ ಪ್ರಾಂತ್ಯದ ಲಿಯುಶೆನ್ಯು ಕಲ್ಲಿದ್ದಲು ಗಣಿಯಲ್ಲಿ ನಡೆದ ಅನಿಲ ಸ್ಫೋಟದಲ್ಲಿ 82 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಚೀನಾದಲ್ಲಿ ಶುಕ್ರವಾರ(ಮೇ 22) ಸಂಜೆ ನಡೆದಿದೆ.

ಆ ವೇಳೆ 242 ಕಾರ್ಮಿಕರು ನೆಲದಡಿ ಸಿಲುಕಿದ್ದು, ಅವರಲ್ಲಿ ಹೆಚ್ಚಿನವರನ್ನು ಇಂದು(ಮೇ 23) ಬೆಳಗ್ಗೆ ಮೇಲ್ಮೈಗೆ ತರಲಾಗಿದೆ. ಸ್ಫೋಟದಲ್ಲಿ 82 ಜನರು ಸಾವನ್ನಪ್ಪಿದ್ದಾರೆ. ನಾಪತ್ತೆಯಾದ ಒಂಬತ್ತು ಜನರಿಗಾಗಿ ರಕ್ಷಣಾ ಸಿಬ್ಬಂದಿ ಶೋಧ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಬೇಕು ಹಾಗೂ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕರೆ ನೀಡಿದ್ದಾರೆ.
