ಆಲಿಕಲ್ಲು, ಬಿರುಗಾಳಿ ಸಹಿತ ಭಾರೀ ಮಳೆಗೆ ತತ್ತರಿಸಿದ ಸಿಲಿಕಾನ್‌ ಸಿಟಿ!!

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಗುರುವಾರ(ಮೇ 21) ಸಂಜೆ ಸುರಿದ ಭಾರೀ ಮಳೆಗೆ ಹಲವೆಡೆ ಮರಗಳು ಧರೆಗುರುಳಿದ್ದು, ವಾಹನಗಳನ್ನ ಜಖಂಗೊಂಡಿದೆ.

ರಾಜಾಜಿನಗರದ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯಲ್ಲಿ ಬೃಹದಾಕಾರದ ಮರವೊಂದು ಧರೆಗೆ ಉರುಳಿ, ಕಾರು ಮತ್ತು ಬೈಕ್‌ಗಳು ಜಖಂಗೊಂಡಿವೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಆದ್ರೆ ಮರ ತೆರವುಗೊಳಿಸುವವರೆಗೆ ಸಂಚಾರ ವ್ಯವಸ್ಥೆಯಲ್ಲಿ ವ್ಯತ್ಯಯ ಕಂಡು ಬಂದಿದೆ.

ಯುಬಿ ಸಿಟಿಯ ಸದರ್ನ್‌ ಸ್ಟಾರ್‌ ಹೋಟೆಲ್‌ ಮುಂಭಾಗ ಮಳೆಗೆ ರಸ್ತೆ ಕುಸಿದು, ಅಲ್ಲೇ ನಿಂತಿದ್ದ ಇನ್ನೋವಾ ಕಾರು ಮಣ್ಣಿನಡಿ ಸಿಲುಕಿಕೊಂಡಿದೆ. ಕುಸಿದ ರಸ್ತೆ ಕಂಡು ಕಳಪೆ ಕಾಮಗಾರಿ ಅಂತ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ನಂದಿನಿ ಲೇಔಟ್‌ನ 4ನೇ ಬ್ಲಾಕ್‌ನ ಒಂದೇ ರಸ್ತೆಯಲ್ಲಿ ಐದಾರು ಮರಗಳು ನೆಲಕಲ್ಕುರುಳಿ 5 ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ಅಂಗಡಿ ಮುಂಭಾಗದ ಶೆಡ್, ಮನೆಗಳ ಮೇಲೂ ಮರ ಬಿದ್ದಿದ್ದು, ಸಂಚಾರಕ್ಕೂ ಅಸ್ತವ್ಯಸ್ತ ಉಂಟಾಗಿದೆ.

error: Content is protected !!