ನೇತ್ರಾವತಿ ನದಿಯಲ್ಲಿ ಗೂಡಿನಬಳಿಯ ಯುವಕನ ಶವ ಪತ್ತೆ!!

ಮಂಗಳೂರು: ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಗೂಡಿನಬಳಿಯ ಯುವಕ ಇರ್ಫಾನ್ ಅವರ ಮೃತದೇಹ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದ್ದು, ಇದು ಸಂಶಯಾಸ್ಪದ ಸಾವು ಆಗಿರುವುದರಿಂದ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ನಾಪತ್ತೆಯಾಗಿದ್ದ ಇರ್ಫಾನ್‌ಗಾಗಿ ಕುಟುಂಬಸ್ಥರು ಮತ್ತು ಸ್ಥಳೀಯರು ಕೆಲವು ದಿನದಿಂದ ಆತನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದರು. ಇದೀಗ ನೇತ್ರಾವತಿ ನದಿಯಲ್ಲಿ ಯುವಕನ ಮೃತದೇಹ ಪತ್ತೆಯಾಗಿದ್ದು, ಸಾವಿನ ಹಿಂದಿನ ಕಾರಣ ಏನೆಂದು ಖಚಿತ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

ಈ ದುರ್ಘಟನೆಗೆ ಸಾಮಾಜಿಕ ಕಾರ್ಯಕರ್ತ ರಿಯಾಝ್ ಹರೇಕಳ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದು, “ಮರ್ಹೂಮ್ ಇರ್ಫಾನ್ ಅವರ ಅಗಲಿಕೆ ನೋವು ತರಿಸಿದೆ. ಮನೆಯವರಿಗೆ ಈ ದುಃಖವನ್ನು ಭರಿಸುವ ತಾಳ್ಮೆ ಹಾಗೂ ಸಹಿಸುವ ಶಕ್ತಿಯನ್ನು ಅಲ್ಲಾಹು ಕರುಣಿಸಲಿ. ಅಲ್ಲಾಹು ಮರ್ಹೂಮ್‌ಗೆ ಮಗ್ಫಿರತ್ ಮತ್ತು ಜನ್ನತುಲ್ ಫಿರ್ದೌಸ್ ದಯಪಾಲಿಸಲಿ” ಎಂದು ಅವರು ಪ್ರಾರ್ಥಿಸಿದ್ದಾರೆ. ಜೊತೆಗೆ, ಈ ಪ್ರಕರಣದ ಬಗ್ಗೆ ಕೂಲಂ ಕುಶ ತನಿಖೆ ನಡೆಸಬೇಕು ಎಂದು ರಿಯಾಝ್ ಹರೇಕಳ ಅವರು ಒತ್ತಾಯಿಸಿದ್ದಾರೆ. ಯುವಕನ ಸಾವಿನ ಹಿಂದಿನ ನೈಜ ಕಾರಣವನ್ನು ಹೊರತರಲು ಪೊಲೀಸ್ ಇಲಾಖೆ ತ್ವರಿತ ಮತ್ತು ಪಾರದರ್ಶಕ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಮೃತದೇಹವನ್ನು ದೇರಳಕಟ್ಟೆಯ ಕನಚೂರು ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ.

error: Content is protected !!