ಲಿಫ್ಟ್‌ನಲ್ಲಿ 1 ಗಂಟೆ ಕಾಲ 9 ಮಂದಿ ಲಾಕ್‌; ರಕ್ಷಿಸಿದ ಅಗ್ನಿಶಾಮಕ ಸಿಬ್ಬಂದಿ

ಶಿವಮೊಗ್ಗ: ನಗರದ ವಿಶಾಲ್ ಮಾರ್ಟ್ ಕಟ್ಟಡದ ಲಿಫ್ಟ್‌ನಲ್ಲಿ ಒಂದು ಗಂಟೆ ಕಾಲ ಸಿಲುಕಿದ್ದ 9 ಜನರನ್ನು ಸುರಕ್ಷಿತವಾಗಿ ರಕ್ಷಣೆ ಮಾಡಿದ ಅಗ್ನಿಶಾಮಕ ದಳದ ತಂಡ.

ಭರತ್(37), ಅನುಷಾ(35), ಅನೀಸ್ ಫಾತಿಮಾ(44), ಮುಸರತ್(39), ಸೂಬಿಯಾ(31), ಮಿಜ್ಜಾ(09), ಬಿಲಾಲ್(06), ಪ್ರಶಾಂತ್(28) ಹಾಗೂ ಪ್ರವೀಣ್ ಕುಮಾರ್(47) ತಾಂತ್ರಿಕ ಸಮಸ್ಯೆಯಿಂದ ಲಿಫ್ಟ್‌ ನಲ್ಲಿ ಸಿಲುಕಿದವರು. ಸುಮಾರು 1 ಗಂಟೆಗೂ ಹೆಚ್ಚು ಕಾಲ ಒಳಗೆ ಇದ್ದರು.

ಲಿಫ್ಟ್‌ನಲ್ಲಿ ಕೆಲ ನಾಗರಿಕರು ಭಯಭೀತರಾಗಿ ಕಿರುಚಾಡಿದ್ದಲ್ಲದೇ ಮಹಿಳೆಯೋರ್ವರ ಆರೋಗ್ಯದಲ್ಲಿ ಕೂಡ ಏರುಪೇರಾಗಿತ್ತು. ಅಗ್ನಿಶಾಮಕ ದಳದ ಸಕಾಲಿಕ ಕಾರ್ಯಾಚರಣೆಯಿಂದ ಲಿಫ್ಟ್‌ನಲ್ಲಿ ಸಿಲುಕಿದ್ದವರೆಲ್ಲರೂ ಸುರಕ್ಷಿತವಾಗಿ ಹೊರಬಂದಿದ್ದಾರೆ. ಅಗ್ನಿಶಾಮಕ ದಳದ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೈಡ್ರಾಲಿಕ್ ಟೂಲ್ಸ್ ಬಳಸಿ, ಲಿಫ್ಟ್ ಮುರಿದು ಒಳಗಿದ್ದ ಜನರನ್ನು ರಕ್ಷಿಸಿದ್ದಾರೆ.

error: Content is protected !!