ನಿಶ್ಚಿತಾರ್ಥಕ್ಕೆ ಅತಿಥಿಗಳನ್ನು ಕರೆದೊಯ್ಯುತ್ತಿದ್ದ ಟೆಂಪೋಗೆ ಟ್ರಕ್‌ ಡಿಕ್ಕಿ: 13 ಮಂದಿ ಸಾ*ವು

ಪಾಲ್ಘರ್: ನಿಶ್ಚಿತಾರ್ಥ ಸಮಾರಂಭಕ್ಕೆ ಅತಿಥಿಗಳನ್ನು ಕರೆದೊಯ್ಯುತ್ತಿದ್ದ ಟೆಂಪೋಗೆ ವೇಗವಾಗಿ ಬಂದ ಕಂಟೇನರ್ ಟ್ರೇಲರ್ ಢಿಕ್ಕಿ ಹೊಡೆದ ಪರಿಣಾಮ ಕನಿಷ್ಠ 13 ಜನರು ಮೃತಪಟ್ಟಿದ್ದು, 25 ಜನರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ಮುಂಬೈ-ಅಹ್ಮದಾಬಾದ್‌ ಹೆದ್ದಾರಿಯಲ್ಲಿ ನಡೆದಿದೆ.

ಮುಂಬೈ-ಅಹ್ಮದಾಬಾದ್‌ ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಟೆಂಪೋದಲ್ಲಿ 50ಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೆದ್ದಾರಿಯಿಂದ ಒಂದು ಕಿಮೀ ದೂರದಲ್ಲಿದ್ದ ಯೂಟರ್ನ್ ಅನ್ನು ತಪ್ಪಿಸಲು ಟ್ರಕ್ ಚಾಲಕ ವಿರುದ್ಧ ದಿಕ್ಕಿನಲ್ಲಿ ಬಂದಾಗ ಟ್ರಕ್‌ ನಿಯಂತ್ರಣ ತಪ್ಪಿದ್ದು, ಅದರ ಕಂಟೇನರ್ ಬಾಕ್ಸ್ ಟೆಂಪೋ ಮೇಲೆ ಬಿದ್ದ ಪರಿಣಾಮ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಮೃತರ ಕುಟುಂಬಗಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.

error: Content is protected !!