ಸ್ಕೂಟರ್‌ಗೆ ಟಿಪ್ಪರ್ ಡಿಕ್ಕಿ; ಇಬ್ಬರಿಗೆ ಗಂಭೀರ ಗಾಯ

ಹಳೆಯಂಗಡಿ: ಇಂದಿರಾ ನಗರ ರೈಲ್ವೆ ಗೇಟ್‌ನ ಬಳಿ ಸ್ಕೂಟರ್‌ಗೆ ಟಿಪ್ಪರ್ ಡಿಕ್ಕಿ ಹೊಡೆದು ಇಬ್ಬರು ಗಂಭೀರ ಗಾಯಗೊಂಡಿರುವ ಘಟನೆ ನಡೆದಿದೆ.

ಇಂದಿರಾ ನಗರದ ಪ್ರತಿಭಾ ಹಾಗೂ ವಾಣಿ ಗಾಯಗೊಂಡವರು.

ಅತ್ತಿಗೆ ಮತ್ತು ನಾದಿನಿ ಇಬ್ಬರೂ ಮನೆಯಿಂದ ಮುಕ್ಕದ ಕಡೆಗೆ ಕೆಲಸಕ್ಕೆ ಹೋಗುವಾಗ ಹಳೆಯಂಗಡಿ ಇಂದಿರಾ ನಗರದ ರೈಲ್ವೆ ಗೇಟಿನ ಪಕ್ಕದ ಕಿರಿದಾದ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಘಟನೆಯಿಂದ ಪ್ರತಿಭಾ ಅವರ ಕಾಲಿಗೆ ಗಂಭೀರ ಗಾಯಗಳಾಗಿದ್ದು, ವಾಣಿ ಅವರಿಗೂ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.

error: Content is protected !!