ಚಿತ್ರದುರ್ಗ: ಚಿತ್ರದುರ್ಗದ ಪ್ರಭಾವಿ ನಾಯಕ ಡಿ. ಸುಧಾಕರ್ ಶ್ವಾಸಕೋಶದ ಸೋಂಕಿನಿಂದ ಕಿಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದು, ಆ ನೋವು ಇನ್ನೂ ಮಾಸಿಲ್ಲ. ಆದರೆ, ಅವರು ಮಣ್ಣಾದ ಎರಡೇ ದಿನಕ್ಕೆ ಚಳ್ಳಕೆರೆಯ ಸುಧಾಕರ್ ನಿವಾಸದ ಅಂಗಳದಲ್ಲಿ ಪತ್ತೆಯಾದ ಆ ನಿಗೂಢ ವಸ್ತುಗಳು ಈಗ ಇಡೀ ಕೋಟೆ ನಾಡಿನಲ್ಲಿ ನಡುಕ ಹುಟ್ಟಿಸಿವೆ.

ಸುಧಾಕರ್ ಮನೆಯಲ್ಲಿ ಕೆಲಸ ಮಾಡೋ ಚಂದ್ರು ಎನ್ನುವ ಹುಡುಗ ಅಂಗಳ ಗುಡಿಸ್ತಾ ಇರುವಾಗ ಮಣ್ಣಿನ ಅಡಿಯಲ್ಲಿ ಏನೋ ನವನವ ಅಂದಿದೆ. ಕೆರೆದು ನೋಡಿದ್ರೆ ಅಲ್ಲಿ ಸಿಕ್ಕಿದ್ದು ಬರಿ ಮಣ್ಣಲ್ಲ, ಬದಲಾಗಿ ಕೆಂಪು ಬಣ್ಣ ಬಳಿದ ನಿಂಬೆಹಣ್ಣುಗಳು, ವಿಚಿತ್ರವಾಗಿ ಕೆತ್ತಿದ ತಾಮ್ರದ ಪತ್ರಗಳು! ಯಾವಾಗ ಚಂದ್ರು ಅದನ್ನ ಹೊರತೆಗೆದು ಜನರಿಗೆ ತೋರಿಸಿದ್ನೋ, ಚಳ್ಳಕೆರೆ ಮತ್ತು ಹಿರಿಯೂರಿನ ಜನ ಬೆಚ್ಚಿ ಬಿದ್ದಿದ್ದಾರೆ.

ಯಾರೋ ಸುಧಾಕರ್ ವಿರುದ್ಧ ಸುಪಾರಿ ಕೊಟ್ಟಿದ್ರೋ ಅಥವಾ ಅವರ ಏಳ್ಗೆಯನ್ನು ಸಹಿಸದವರು ಈ ವಾಮಾಚಾರದ ಮೊರೆ ಹೋಗಿದ್ರೋ ಅನ್ನೋ ಪ್ರಶ್ನೆ ಈಗ ಗಾಳಿಯಲ್ಲಿ ತೇಲಾಡ್ತಿದೆ. ವೈದ್ಯಕೀಯ ಲೋಕ ʻಇನ್ಫೆಕ್ಷನ್’ ಅಂತ ವರದಿ ಕೊಟ್ಟಿರಬಹುದು, ಆದರೆ ಈ ಮಂತ್ರ-ತಂತ್ರದ ವಸ್ತುಗಳನ್ನು ನೋಡಿದ ಜನ ಮಾತ್ರ “ಇದು ಸಾಮಾನ್ಯ ಸಾವಲ್ಲ ಕಣ್ರೀ, ಇದರ ಹಿಂದೆ ವಾಮಾಚಾರದ ಮಸಲತ್ತಿದೆ” ಅಂತ ಗುಸುಗುಸು ಮಾತಾಡ್ತಿದ್ದಾರೆ.

ಅಚ್ಚರಿಯ ವಿಷಯ ಅಂದ್ರೆ, ಮನೆಯ ಅಂಗಳದಲ್ಲೇ ಇಂತಹ ಭಯಾನಕ ವಸ್ತುಗಳು ಸಿಕ್ಕಿದ್ದರೂ ಸುಧಾಕರ್ ಕುಟುಂಬ ಮಾತ್ರ ಮೌನಕ್ಕೆ ಶರಣಾಗಿದೆ. ಪೊಲೀಸರಿಗಂತೂ ಈವರೆಗೂ ಯಾವುದೇ ದೂರು ಹೋಗಿಲ್ಲ. ಆದರೆ ಸೋಶಿಯಲ್ ಮೀಡಿಯಾದಲ್ಲಿ ಮಾತ್ರ ಆ ವಿಡಿಯೋ ಕಾಡ್ಗಿಚ್ಚಿನಂತೆ ಹಬ್ಬುತ್ತಾ ಇಡೀ ಚಿತ್ರದುರ್ಗದ ರಾಜಕೀಯ ಅಂಗಳವನ್ನೇ ಬೆಚ್ಚಗಾಗಿಸಿದೆ. ಆ ತಾಮ್ರದ ಪತ್ರದಲ್ಲಿ ಯಾರ ಹೆಸರಿತ್ತು? ಆ ನಿಂಬೆಹಣ್ಣಿನ ಮೇಲೆ ಯಾರ ಸಿಟ್ಟು ಇತ್ತು? ಉತ್ತರ ಸಿಗದ ಈ ಪ್ರಶ್ನೆಗಳು ಸುಧಾಕರ್ ಸಾವಿನ ರಹಸ್ಯವನ್ನು ಮತ್ತಷ್ಟು ಗೋಜಲು ಮಾಡಿವೆ!
