ಸದಾಶಿವನಗರ ಪಾರ್ಕ್‌ಗೆ ಶೀಘ್ರವೇ ಹೊಸ ಕಳೆ: ಅಭಿವೃದ್ಧಿ ಕಾಮಗಾರಿಗೆ ಶಾಸಕ ಕಾಮತ್ ಭೂಮಿ ಪೂಜೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 49ನೇ ಕಂಕನಾಡಿ ವಾರ್ಡಿನ ಸದಾಶಿವನಗರ ಪಾರ್ಕ್‌ನಲ್ಲಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ (ಮೂಡಾ) ವತಿಯಿಂದ ಹಮ್ಮಿಕೊಳ್ಳಲಾದ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವೇದವ್ಯಾಸ ಕಾಮತ್ ಅವರು ಭೂಮಿ ಪೂಜೆ ನೆರವೇರಿಸಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, “ಈಗಾಗಲೇ ಮೂಡಾ ವತಿಯಿಂದ ಈ ಪಾರ್ಕ್ ಅಭಿವೃದ್ಧಿಗೊಂಡಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುತ್ತಿದ್ದಾರೆ. ಪಾರ್ಕ್‌ನಲ್ಲಿ ಇನ್ನಷ್ಟು ಮೂಲಭೂತ ಸೌಕರ್ಯಗಳ ಅಗತ್ಯವಿದೆ ಎಂದು ಸಾರ್ವಜನಿಕರು ಮನವಿ ಮಾಡಿದ್ದರು. ಅವರ ಬೇಡಿಕೆಗೆ ಸ್ಪಂದಿಸಿ, ಮೂಡಾ ಸಭೆಯಲ್ಲಿ ಎಲ್ಲರ ಸಹಕಾರದೊಂದಿಗೆ ಸುಮಾರು ರೂ. 10.65 ಲಕ್ಷ ಅನುದಾನಕ್ಕೆ ಅನುಮೋದನೆ ಪಡೆದುಕೊಳ್ಳಲಾಗಿದೆ. ಈ ಹೊಸ ಕಾಮಗಾರಿಯಿಂದ ಪಾರ್ಕ್ ಮತ್ತಷ್ಟು ಸುಸಜ್ಜಿತಗೊಳ್ಳಲಿದೆ,” ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮೂಡಾ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ಪ್ರಾಧಿಕಾರದ ಆಯುಕ್ತರಾದ ಮೊಹಮ್ಮದ್ ನಜೀರ್, ಪ್ರಮುಖರಾದ ಭಾಸ್ಕರ ಚಂದ್ರ ಶೆಟ್ಟಿ, ಕಿರಣ್ ರೈ, ರಘುನಾಥ್ ಶೆಟ್ಟಿ, ಸುಕೇಶ್, ಚೇತನ್ ನೆಕ್ಕರೆಮಾರ್, ಸುಮತಿ, ಮಾನಸ ರೈ, ಮೌನೇಶ್ ಚೌಟ, ಯಶೋಧ ಗಟ್ಟಿ, ತನುಜಾ ಎಕ್ಕೂರು, ನೀರಚ್‌ಚಂದ್ರ ಪಾಲ್, ಸುಮನ್‌ದಾಸ್, ಅಬ್ದುಲ್ ಜಲೀಲ್, ಸಭಿತಾ ಮಿಸ್ಕತ್ ಸೇರಿದಂತೆ ಸ್ಥಳೀಯರು ಮತ್ತು ಪ್ರಾಧಿಕಾರದ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!