ಬೀದಿ ನಾಯಿ ದಾಳಿಗೆ 5 ತಿಂಗಳ ಹಸುಗೂಸು ಬಲಿ!!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೀದರ್: ಬೀದಿ ನಾಯಿ ದಾಳಿಯಿಂದಾಗಿ 5 ತಿಂಗಳ ಹಸುಗೂಸು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಬೀದರ್ ಜಿಲ್ಲೆಯ ಹುಮ್ನಾಬಾದ್ ತಾಲೂಕಿನ ದುಬಲಗುಂಡಿ ಗ್ರಾಮದಲ್ಲಿ ನಡೆದಿದೆ.

ಸುಧಾ ಹಾಗೂ ಸಿದ್ದಪ್ಪ ದಂಪತಿಯ 5 ತಿಂಗಳ ಶಿವಾನಿ ಮೃತ ಹಸುಗೂಸು.

ಮನೆಯ ಪಡಸಾಲೆಯಲ್ಲಿ ಮಗುವನ್ನ ಮಲಗಿಸಿ ತಾಯಿ ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಮನೆಗೆ ನುಗ್ಗಿದ ನಾಯಿ ಹಸುಗೂಸನ್ನ ಮನಬಂದಂತೆ ಕಚ್ಚಿ ಹಾಕಿದ ಪರಿಣಾಮ ಮಗು ಅರಜೀವಾವಸ್ಥೆಗೊಂಡಿತ್ತು.

ಮಗುವನ್ನು ಬೀದರ್‌ನ ಬ್ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.

error: Content is protected !!