
ಮೂಡುಬಿದಿರೆ: ಕಾರಿಗೆ ಟೆಂಪೋ ಟ್ರಾವೆಲರ್ ಹಿಂಭಾಗದಿಂದ ಡಿಕ್ಕಿ ಹೊಡೆದ ಪರಿಣಾಮ ಕಾರು ನಜ್ಜುಗುಜ್ಜಾದ ಘಟನೆ ಮೂಡುಬಿದಿರೆಯ ಸಮಗರಗುಂಡಿ ಸಮೀಪದ ಬಲ್ಲಾಳ್ ಹೊಟೇಲ್ ಮುಂಭಾಗದಲ್ಲಿ ಇಂದು(ಮೇ 09) ನಡೆದಿದೆ.

ಕಾರಿನಲ್ಲಿ ಮಹಿಳೆಯರು ಸಹಿತ ಸುಮಾರು 5 ಮಂದಿ ಪ್ರಯಾಣಿಕರು ಮೂಡುಬಿದಿರೆಯಿಂದ ಮಂಗಳೂರಿನತ್ತ ತೆರಳುತ್ತಿದ್ದರು. ಈ ವೇಳೆ ಈ ಘಟನೆ ನಡೆದಿದ್ದು, ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ.

ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
