ವಿಮಾನದಲ್ಲಿ ಗಗನಸಖಿ ಸೊಂಟ ಮುಟ್ಟಿ “ಫ್ರೆಂಡ್‌ಶಿಪ್ ರೂಪದಲ್ಲಿ ಸ್ಪರ್ಶಸಿದ್ದೇನೆ” ಎಂದ ಪ್ರಯಾಣಿಕ; ಆರೋಪಿ ವಶಕ್ಕೆ

ಬೆಂಗಳೂರು: ಬಹ್ರೇನ್‌ನಿಂದ ಬೆಂಗಳೂರಿಗೆ ವಿಮಾನದಲ್ಲಿ ಬರುವಾಗ ಗಗನಸಖಿಯ ಸೊಂಟ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿ ಕೇರಳ ಮೂಲದ ಪ್ರಯಾಣಿಕನೋರ್ವನನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕೇರಳ ಮೂಲದ ಜಾಕೋಬ್ ಅಲೆಕ್ಸಾಂಡರ್ ಬಂಧಿತ ಆರೋಪಿ.

ಮೇ 4 ರಂದು ಗಲ್ಫ್ ಏರ್ ವಿಮಾನದಲ್ಲಿ ಬಹ್ರೇನ್‌ನಿಂದ ವಿಮಾನ ನಿಲ್ದಾಣಕ್ಕೆ ಬರುವಾಗ ಘಟನೆ ನಡೆದಿದ್ದು, ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಅಲೆಕ್ಸಾಂಡರ್ ಎಂಬಾತ ತನ್ನ ಸೊಂಟಕ್ಕೆ ಕೈಗಳಿಂದ ಮುಟ್ಟಲು ಯತ್ನಿಸಿದ್ದ. ಬೇಡವೆಂದರೂ ಪದೇ ಪದೇ ಸೊಂಟ ಮುಟ್ಟಿ ಚೆನ್ನಾಗಿದೆ ಎಂದು ಹೇಳಿ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ನಮ್ಮ ಕ್ಯಾಪ್ಟನ್‌ಗೆ ಮಾಹಿತಿ ನೀಡಲಾಗಿತ್ತು. ಅವರು ವಿಚಾರಿಸಿದಾಗ ಆರೋಪಿ ಅತಿರೇಕ ವರ್ತನೆ ತೋರಿದಲ್ಲದೆ, ಫ್ರೆಂಡ್‌ಶಿಪ್ ರೂಪದಲ್ಲಿ ಆಕೆಯ ಸೊಂಟ ಸ್ಪರ್ಶಸಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದ.

ಹಾಗಾಗಿ ಲೈಂಗಿಕ ಕಿರುಕುಳ ನೀಡಿದ ಆರೋಪಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಗಗನಸಖಿ ದೂರಿನಲ್ಲಿ ಆರೋಪಿಸಿದ್ದಾರೆ. ಈಕೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

error: Content is protected !!