
ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ 2026ರ ಐಪಿಎಲ್ ಫೈನಲ್ ಪಂದ್ಯ ಸ್ಥಳಾಂತರಗೊಳ್ಳುವ ಸಾಧ್ಯತೆ ಇದೆ. ಎಂಎಲ್ಎ, ಎಂಎಲ್‌ಸಿ, ಎಂಪಿಗಳಿಗೆ ನೀಡಲಾಗುತ್ತಿರುವ ಉಚಿತ ಟಿಕೆಟ್ ವಿವಾದವೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.

ಸುಮಾರು 299 ಜನಪ್ರತಿನಿಧಿಗಳಿಗೆ ತಲಾ 2 ಉಚಿತ ಟಿಕೆಟ್‌ಗಳನ್ನು ನೀಡಲಾಗುತ್ತಿದ್ದರೂ, ಇದೀಗ ಪ್ರತಿಯೊಬ್ಬರಿಗೂ 4-5 ಟಿಕೆಟ್ ನೀಡಬೇಕೆಂದು ಒತ್ತಡ ಹೇರಲಾಗುತ್ತಿದೆ. ಈ “ಎಂಎಲ್ಎ ಟಿಕೆಟ್ ಕಿರಿಕಿರಿ”ಯಿಂದ ದೂರವಿರಲು ಬಿಸಿಸಿಐ ಫೈನಲ್ ಪಂದ್ಯಾಟವನ್ನು ಬೇರೆಡೆಗೆ ಸ್ಥಳಾಂತರಿಸುವ ಯೋಚನೆ ಮಾಡುತ್ತಿದೆ.

ಕಳೆದ ಬಾರಿ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದ ನಂತರ ಚಿನ್ನಸ್ವಾಮಿಯಲ್ಲಿ ಪ್ರಮುಖ ಪಂದ್ಯಗಳು ನಿಲುಗಡೆಯಾಗಿದ್ದವು. ಈಗ ಪಂದ್ಯಗಳಿಗೆ ಅನುಮತಿ ದೊರಕಿದರೂ, ಹೊಸ ವಿವಾದ ತಲೆ ಎತ್ತಿ ನಿಂತಿದೆ. ಆದರೆ ಫೈನಲ್ ಮ್ಯಾಚ್ ಸ್ಥಳಾಂತರದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಕೆಎಎ ವಕ್ತಾರ ವಿನಯ್ ಮೃತ್ಯುಂಜಯ ಹೇಳಿದ್ದಾರೆ.