ಶಿರ್ವ ಧರ್ಮಗುರು ಆತ್ಮಹತ್ಯೆ ಪ್ರಕರಣದಲ್ಲಿ ಆರೆಸ್ಟ್ ಆಗಿದ್ದ ಡೇವಿಡ್ ಡಿಸೋಜ!

ಉಡುಪಿ: ಇಂದು ಶಿರ್ವ ಮುದರಂಗಡಿಯ ತಮ್ಮ ಆಫೀಸ್ ಎದುರುಗಡೆಯೇ ದುಷ್ಕರ್ಮಿಗಳ ಗುಂಡೇಟಿಗೆ ಬಲಿಯಾಗಿರುವ ಡೇವಿಡ್ ಡಿಸೋಜ 2019ರಲ್ಲಿ ನಡೆದಿದ್ದ ಶಿರ್ವ ಚರ್ಚ್‍ನ ಸಹಾಯಕ ಧರ್ಮಗುರು ಹಾಗೂ ಶಿರ್ವ ಡೋನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾ.ಮಹೇಶ್ ಡಿಸೋಜಾ ಅವರ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಬಂಧಿತನಾಗಿದ್ದ. ಆತನಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು.


ಡೇವಿಡ್ ಡಿಸೋಜಾನ ಪತ್ನಿ ಜೊತೆ ಫಾ.ಮಹೇಶ್ ಡಿಸೋಜಾ ನಿರಂತರ ಫೋನ್ ಸಂಭಾಷಣೆ, ಮೊಬೈಲ್ ಚಾಟಿಂಗ್ ನಡೆಸುತ್ತಿದ್ದರು ಎನ್ನಲಾಗಿದ್ದು, ಇದನ್ನು ತನ್ನ ಪತ್ನಿಯ ಮೊಬೈಲ್ ನೋಡಿ ತಿಳಿದ ಡೇವಿಡ್ ಫೋನ್‍ನಲ್ಲಿ ಫಾ.ಮಹೇಶ್‍ರಿಗೆ ಬೆದರಿಕೆ ಹಾಕಿದ್ದ. ಇದು ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ದೃಢಪಟ್ಟ ಆರೋಪದಡಿ ತನಿಖಾಧಿಕಾರಿ ಉಡುಪಿಯ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಆರೋಪಿ ಡೇವಿಡ್ ಡಿಸೋಜಾನನ್ನು ಬಂಧಿಸಿದ್ದರು.
ಧರ್ಮಗುರು ಆತ್ಮಹತ್ಯೆಗೆ ಡೇವಿಡ್ ಮತ್ತಿತರರು ಕಾರಣ ಎಂದು ನ್ಯಾಯಕ್ಕಾಗಿ ಸ್ಥಳೀಯರು ಪ್ರತಿಭಟನೆಯನ್ನೂ ನಡೆಸಿದ್ದರು.

error: Content is protected !!