ಶಿರ್ವ-ಮುದರಂಗಡಿಯಲ್ಲಿ ಹಾಡಹಗಲೇ ಶೂಟೌಟ್: ಬಸ್ ಉದ್ಯಮಿ ಬರ್ಬರ ಹ*ತ್ಯೆ!

ಉಡುಪಿ: ಜಿಲ್ಲೆಯ ಶಿರ್ವ ಮುದರಂಗಡಿಯ ಸಂತ ಪ್ರಾನ್ಸಿಸ್ ಕ್ಸೇವಿಯರ್ ಚರ್ಚ್ ಮುಂಭಾಗ ಬಸ್ ಉದ್ಯಮಿಯನ್ನು ಬೈಕ್ ನಲ್ಲಿ ಬಂದ ಇಬ್ಬರ ತಂಡ ಹಾಡಹಗಲೇ ಗುಂಡು ಹಾರಿಸಿ ಹತ್ಯೆಗೈದು ಎಸ್ಕೇಪ್ ಆದ ಘಟನೆ ಇಂದು ಸಂಜೆ ನಡೆದಿದೆ.


ಪ್ರಿನ್ಸೆಸ್ ಬಸ್ ಗಳ ಮಾಲಕ ಡೇವಿಡ್ ಡಿಸೋಜ(54) ಹತ್ಯೆಯಾದ ಉದ್ಯಮಿ.

ಮುದರಂಗಡಿ ಪೇಟೆಯಲ್ಲಿ ಡೇವಿಡ್ ಅವರ ಕಚೇರಿಯ ಎದುರಲ್ಲೇ ಶೂಟೌಟ್ ನಡೆದಿದೆ. ಇಬ್ಬರು ಬೈಕ್ ನಲ್ಲಿ ಬಂದು ಹತ್ತಿರದಿಂದ ಮೂರು ಸುತ್ತು ಗುಂಡು ಹಾರಿಸಿದ್ದಾರೆ. ಗಾಯಗೊಂಡಿದ್ದ ಡೇವಿಡ್ ಡಿ ಸೋಜ ಆಸ್ಪತ್ರೆಗೆ ಕರೆದೊಯ್ಯುವ ದಾರಿಯಲ್ಲಿ ಮೃತಪಟ್ಟಿದ್ದಾರೆ. ಪಡುಬಿದ್ರೆ ಮತ್ತು ಶಿರ್ವ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

error: Content is protected !!