ಮಂಗಳೂರು: ಮಧ್ಯ ಕೋರ್ದಬ್ಬು ದೈವಸ್ಥಾನದ ಜೀರ್ಣೋದ್ಧಾರದ ವಿಜ್ಞಾಪಣಾ ಪತ್ರ ಬಿಡುಗಡೆ ಸಮಾರಂಭವು ಮಧ್ಯ ಖಡ್ಗೇಶ್ವರ ಖಡ್ಗೇಶ್ವರಿ ದೇವಸ್ಥಾನದ ವಠಾರದಲ್ಲಿ ಜರುಗಿತು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಕರುಣಾಕರ ಎಂ ಶೆಟ್ಟಿ ಮಧ್ಯಗುತ್ತು ಬಿಡುಗಡೆ ಮಾಡಿದರು.

ವೇದಿಕೆಯಲ್ಲಿ ಕೋರ್ದಬ್ಬು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್ ಚೌಟ ಮಧ್ಯ, ಮುಂಬಯಿ ವಕೀಲರಾದ ದಿನಕರ ಶೆಟ್ಟಿ ಕುಂಜರಬಾಳಿಕೆ, ಮುಂಬಯಿ ಉದ್ಯಮಿ ರಮೇಶ್ ಶೆಟ್ಟಿ ಸಾಣೂರು ಮಧ್ಯ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಭಾಲಾಕ್ಷಿ ಶೆಟ್ಟಿ, ಬೋಜ ಅಂಚನ್, ಮುಂಬಯಿ ಉದ್ಯಮಿ ಜಗದೀಶ್ ಶೆಟ್ಟಿ ಪಡಿ, ಪ್ರೇಮಾಲಾಕ್ಷಿ ಶೆಟ್ಟಿ ಕುಂಜರಬಾಳಿಕೆ, ಪ್ರಕಾಶ್ ಪೂಜಾರಿ ಮಧ್ಯ, ಜಯಂತ ದೇವಾಡಿಗ ಮಧ್ಯ ಮುಂತಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಸೇವಾ ಸಂಘದ ಅಧ್ಯಕ್ಷ ಪ್ರಭಾಕರ ಶೆಟ್ಟಿ ವಹಿಸಿದರು, ಕೋರ್ದಬ್ಬು ದೈವಸ್ಥಾನದ ಜೀರ್ಣೋದ್ಧಾರ ಸಮಿತಿ ಪ್ರಧಾನ ಕಾರ್ಯದರ್ಶಿ ಪುಷ್ಷರಾಜ್ ಶೆಟ್ಟಿ ಮಧ್ಯ ಸ್ವಾಗತಿಸಿ ,ಕೋಶಾಧಿಕಾರಿ ದಿನೇಶ್ ದೇವಾಡಿಗ ವಿಜ್ಞಾಪಣಾ ಪತ್ರ ಓದಿದರು. ಜತೆ ಕಾರ್ಯದರ್ಶಿ ರಾಜೇಶ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.
