ಬೈಕ್‌ಗೆ ಟಿಪ್ಪರ್‌ ಡಿಕ್ಕಿ; ಇಬ್ಬರು ಸಾ*ವು; ಮತ್ತಿಬ್ಬರಿಗೆ ಗಂಭೀರ ಗಾಯ

ರಾಯಚೂರು: ಅತ್ತನೂರು ದಿಡ್ಡಿ ಬಸವೇಶ್ವರ ಜಾತ್ರೆ ನೋಡುವುದಕ್ಕೆಂದು ಬಂದು ವಾಪಸ್ ಹಿಂದಿರುಗುವ ವೇಳೆ ಬೈಕ್‌ಗೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಸಿರವಾರ ತಾಲೂಕಿನ ಶಾಖಾಪುರ ಮುಖ್ಯರಸ್ತೆಯಲ್ಲಿ ನಡೆದಿದೆ.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಬೈಕ್ ಓಡಿಸುತ್ತಿದ್ದ ಅಂಜಿನಯ್ಯ ನಾಯಕ(37) ಹಾಗೂ ಅರ್ಚನಾ(10) ಮೃತರು. ಗಾಯಾಳುಗಳಲ್ಲಿ ಶ್ವೇತಾ(19) ಅವರ ಕಾಲು ಕಟ್ ಆಗಿದ್ದು, ಲಕ್ಷ್ಮಿ(22) ಎಂಬವವರಿಗೆ ಗಂಭೀರ ಗಾಯಗಳಾಗಿವೆ.

ಬಸವೇಶ್ವರ ಜಾತ್ರೆಯ ರಥೋತ್ಸವ ಮುಗಿಸಿ ನಾಲ್ವರು ಒಂದೇ ಬೈಕ್‌ನಲ್ಲಿ ವಾಪಸ್ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಘಟನೆ ಸಂಭವಿಸಿದ್ದು, ಟಿಪ್ಪರ್ ಡಿಕ್ಕಿ ಹೊಡೆದ ರಭಸಕ್ಕೆ ಮೃತರ ದೇಹ ನಜ್ಜುಗುಜ್ಜಾಗಿ, ದೇಹದ ಭಾಗಗಳು ಛಿದ್ರ ಛಿದ್ರವಾಗಿವೆ. ಗಾಯಾಳುಗಳಿಬ್ಬರನ್ನು ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಸಿರವಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!