ತಾಯಿ-ಮಗಳ ಮೃತದೇಹ ಕೃಷಿ ಹೊಂಡದಲ್ಲಿ ಪತ್ತೆ; ಅಳಿಯ ವಿರುದ್ಧ ದೂರು ನೀಡಿದ ಹೆತ್ತವರು

ಆನೇಕಲ್: ತಾಯಿ-ಮಗಳ ಮೃತದೇಹ ಕೃಷಿ ಹೊಂಡದಲ್ಲಿ ಪತ್ತೆಯಾಗಿರುವ ಘಟನೆ ಸೂರ್ಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆ ಚಂದಾಪುರ ಬಳಿಯ ಲಕ್ಷ್ಮಿಸಾಗರ ಎಂಬಲ್ಲಿ ನಡೆದಿದೆ.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ತಮಿಳುನಾಡು ಮೂಲದ ಲಾವಣ್ಯಾ(28), ಅವರ ಪುತ್ರಿ ಲಕ್ಷ್ಯಾ(8) ಮೃತರು.

ಮೃತದೇಹವನ್ನು ಕೃಷಿ ಹೊಂಡದಲ್ಲಿ ಕಂಡ ಸ್ಥಳೀಯರು ಸೂರ್ಯನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಶನಿವಾರವೇ ಇವರು ಕೃಷಿ ಹೊಂಡದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿರುವ ಲಾವಣ್ಯಾರ ಹೆತ್ತವರು ಅಳಿಯ ಸಂಪತ್ ರೆಡ್ಡಿ ವಿರುದ್ಧ ದೂರು ನೀಡಿದ್ದಾರೆ.

ಅದರಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

error: Content is protected !!