ಹೈದರಾಬಾದ್: ಸಿನಿಮಾ ರಂಗ ಅಂದಾಕ್ಷಣ ನಮಗೆ ನೆನಪಾಗುವುದು ಅಲ್ಲಿನ ಬಣ್ಣದ ಬದುಕು, ಸ್ಟಾರ್‌ಗಳ ಐಷಾರಾಮಿ ಲೈಫ್‌ಸ್ಟೈಲ್. ಆದರೆ ಈ ಮಿನುಗುವ ಲೋಕದ ಹಿಂದೆ ನಟಿಯರು ಎದುರಿಸುವ ಆರ್ಥಿಕ ಸವಾಲುಗಳು ಅಷ್ಟಿಷ್ಟಲ್ಲ. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ನಟಿ ನಿಧಿ ಅಗರ್ವಾಲ್, ನಾಯಕಿಯರ ಜೀವನದ ಹಣಕಾಸಿನ ಸತ್ಯಗಳನ್ನು ತೆರೆದಿಟ್ಟಿದ್ದು, ಅವರ ತಿಂಗಳ ಬಜೆಟ್ ವಿವರ ಕೇಳಿ ಫ್ಯಾನ್ಸ್ ದಂಗಾಗಿದ್ದಾರೆ.

ಚಿತ್ರರಂಗದಲ್ಲಿ ಒಬ್ಬ ನಟಿಯಾಗಿ ತನ್ನ ಅಸ್ತಿತ್ವ ಉಳಿಸಿಕೊಳ್ಳಲು ತಿಂಗಳಿಗೆ ಕನಿಷ್ಠ 5 ಲಕ್ಷ ರೂಪಾಯಿ ಖರ್ಚು ಮಾಡಲೇಬೇಕು ಎಂದು ನಿಧಿ ಹೇಳಿದ್ದಾರೆ. ಈ ಹಣ ಕೇವಲ ಮೋಜು-ಮಸ್ತಿಗೆ ಬಳಕೆಯಾಗುವುದಿಲ್ಲ.

ಬದಲಾಗಿ, ಸದಾ ಕ್ಯಾಮೆರಾ ಮುಂದೆ ಸುಂದರವಾಗಿ ಕಾಣಲು ಬೇಕಾದ ಫಿಟ್‌ನೆಸ್, ಚರ್ಮದ ಆರೈಕೆ (Beauty Care), ಗುಣಮಟ್ಟದ ಆಹಾರ ಮತ್ತು ಫ್ಯಾಶನ್ ಡ್ರೆಸ್‌ಗಳಿಗಾಗಿ ಈ ಮೊತ್ತ ವ್ಯಯವಾಗುತ್ತದೆ. ಸಣ್ಣ ತಪ್ಪು ಮಾಡಿದರೂ ಇಮೇಜ್‌ಗೆ ಧಕ್ಕೆ ಬರುವ ಕಾರಣ ಇಷ್ಟೆಲ್ಲಾ ಖರ್ಚು ಅನಿವಾರ್ಯ ಎನ್ನುವುದು ಅವರ ವಾದ.

ಇದೇ ಸಂದರ್ಭದಲ್ಲಿ ಸಂಭಾವನೆಯ ತಾರತಮ್ಯದ ಬಗ್ಗೆಯೂ ನಿಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಸಿನಿಮಾದಲ್ಲಿ ಹೀರೋಗಳಿಗೆ ಸಿಗುವ ಮೊತ್ತಕ್ಕೂ ನಾಯಕಿಯರಿಗೆ ಸಿಗುವ ಸಂಭಾವನೆಗೂ ಆಕಾಶ ಭೂಮಿಯ ವ್ಯತ್ಯಾಸವಿದೆ.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಆದರೆ, ಹೊರಗೆ ಕಾಣಿಸಿಕೊಳ್ಳುವಾಗ ಮಾಡುವ ಖರ್ಚು ಮಾತ್ರ ಇಬ್ಬರಿಗೂ ಸಮಾನವಾಗಿರುತ್ತದೆ,” ಎಂದು ಹೇಳುವ ಮೂಲಕ ನಟಿಯರು ಎದುರಿಸುವ ಆರ್ಥಿಕ ಒತ್ತಡವನ್ನು ಅವರು ವಿವರಿಸಿದ್ದಾರೆ. ಸಿನಿಮಾಗಳು ಇಲ್ಲದಿದ್ದಾಗ ಬ್ರ್ಯಾಂಡ್ ಪ್ರಚಾರಗಳೇ ಇವರಿಗೆ ಜೀವನಾಧಾರವಾಗುತ್ತವೆ.

ತೆಲುಗು, ತಮಿಳು ಹಾಗೂ ಹಿಂದಿ ಸಿನಿಮಾಗಳಲ್ಲಿ ಸ್ಟಾರ್ ನಟರ ಜೊತೆ ನಟಿಸಿದರೂ ನಿಧಿ ಅಗರ್ವಾಲ್‌ಗೆ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ‘ಹರಿಹರ ವೀರಮಲ್ಲು’ ಮತ್ತು ‘ದಿ ರಾಜಾ ಸಾಬ್’ ಅಂತಹ ದೊಡ್ಡ ಸಿನಿಮಾಗಳು ಕೂಡ ಅವರಿಗೆ ಬ್ರೇಕ್ ನೀಡಲಿಲ್ಲ.

ಆದರೂ ಸದ್ಯಕ್ಕೆ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳ ಮೂಲಕ ಸಕ್ರಿಯವಾಗಿರುವ ಅವರು, ಗ್ಲಾಮರ್ ಲೋಕದ ಸ್ಪರ್ಧೆಯಲ್ಲಿ ಮುಂದುವರಿಯಲು ಕಷ್ಟಪಡುತ್ತಿದ್ದಾರೆ ಎಂಬುದು ಅವರ ಮಾತುಗಳಿಂದಲೇ ಸ್ಪಷ್ಟವಾಗಿದೆ.
