ಮುಂಬಯಿ: ಬಾಲಿವುಡ್‌ನಲ್ಲಿ ಇತ್ತೀಚೆಗೆ ಒಂದಷ್ಟು ಸದ್ದು ಮಾಡಿದ್ದ ವಿವಾದಿತ ʼದಿ ಕೇರಳ ಸ್ಟೋರಿ -2ʼ ಚಿತ್ರ ಒಟಿಟಿ ರಿಲೀಸ್‌ಗೆ ದಿನಾಂಕ ನಿಗದಿಯಾಗಿದೆ.

ಕಾಮಾಕ್ಯ ನಾರಾಯಣ್ ಸಿಂಗ್ ನಿರ್ದೇಶನದ ಚಿತ್ರ ಫೆ.27ಕ್ಕೆ ವರ್ಲ್ಡ್ ವೈಲ್ಡ್ ರಿಲೀಸ್ ಆಗಿತ್ತು. 2023ರಲ್ಲಿ ಚಿತ್ರದ ಮೊದಲ ಭಾಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಆದರೆ ಎರಡನೇ ಭಾಗ ಅಷ್ಟಾಗಿ ಕಮಾಲ್ ಮಾಡಿಲ್ಲ.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ
ರಿಲೀಸ್ ಬಳಿಕ ಚಿತ್ರವನ್ನು ಕೆಲವರು ʼಭಯಾನಕ ಸತ್ಯʼವೆಂದು ಕರೆದರು, ಇನ್ನು ಕೆಲವರು ʼಪ್ರೊಪಗಂಡಾʼ ವೆಂದು ಕರೆದರು. ಇದರ ಪರಿಣಾಮ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿ ಬಾಕ್ಸಾಫೀಸ್ ಗಳಿಕೆಯಲ್ಲಿ ಹಿಂದೆ ಉಳಿಯಿತು.

ಚಿತ್ರ ಥಿಯೇಟರ್‌ಗೆ ಬಂದು ಹೆಚ್ಚೆಂದರೆ ಒಂದು ವಾರ ಸದ್ದು ಮಾಡಿತ್ತು. ಆದಾದ ಬಳಿಕ ನಿಧಾನವಾಗಿ ಮಾಯವಾಯಿತು. ಇದೀಗ ಒಟಿಟಿಗೆ ʼದಿ ಕೇರಳ ಸ್ಟೋರಿ -2ʼ ರಿಲೀಸ್‌ಗೆ ದಿನಾಂಕ ಫಿಕ್ಸ್ ಆಗಿದೆ.

ಇದೇ ಮೇ.1ರಿಂದ ʼಜೀ5ʼ ಒಟಿಟಿಯಲ್ಲಿ ಚಿತ್ರ ಸ್ಟ್ರೀಮಿಂಗ್ ಆಗಲಿದೆ ಎಂದು ಚಿತ್ರತಂಡ ಹೇಳಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಚಿತ್ರ ಪ್ರಸಾರವಾಗಲಿದೆ.

ಚಿತ್ರ 30 ಕೋಟಿ ರೂ. ಬಜೆಟ್‌ನಲ್ಲಿ ಬಂದಿತ್ತು. ಆದರೆ ಜಾಗತಿಕ ಕೇವಲ 60 ಕೋಟಿ ರೂಪಾಯಿಯಷ್ಟನೇ ಗಳಿಸಿತು. ಚಿತ್ರದಲ್ಲಿ ಉಲ್ಕಾ ಗುಪ್ತಾ, ಅದಿತಿ ಭಾಟಿಯಾ ಮತ್ತು ಐಶ್ವರ್ಯಾ ಓಜಾ ಮುಂತಾದವರು ನಟಿಸಿದ್ದಾರೆ.