ಟೈಮ್ 100 ಗಾಲಾದಲ್ಲಿ ಮಿಂಚಿದ ಕೆ-ಪಾಪ್ ಸುಂದರಿ ಜೆನ್ನಿ; ಬ್ಲ್ಯಾಕ್‌ಪಿಂಕ್ ಸ್ಟಾರ್ ತೊಟ್ಟ ʻಸ್ವದೇಶ್’ ಆಭರಣದ ಹಿಂದಿದೆ ಅಂಬಾನಿ ಕನೆಕ್ಷನ್!

ನ್ಯೂಯಾರ್ಕ್: ನ್ಯೂಯಾರ್ಕ್‌ನ ಲಿಂಕನ್ ಸೆಂಟರ್‌ನಲ್ಲಿ ಇತ್ತೀಚೆಗೆ ನಡೆದ ಪ್ರತಿಷ್ಠಿತ ‘ಟೈಮ್ 100 ಗಾಲಾ 2026’ (TIME100 Gala) ಸಮಾರಂಭದಲ್ಲಿ ದಕ್ಷಿಣ ಕೊರಿಯಾದ ಖ್ಯಾತ ಗಾಯಕಿ, ಬ್ಲ್ಯಾಕ್‌ಪಿಂಕ್ ಖ್ಯಾತಿಯ ಜೆನ್ನಿ ಕಿಮ್ ಎಲ್ಲರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಈ ಬಾರಿಯ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಜೆನ್ನಿ, ರೆಡ್ ಕಾರ್ಪೆಟ್ ಮೇಲೆ ಏಕೈಕ ಕೆ-ಪಾಪ್ ತಾರೆಯಾಗಿ ಮಿಂಚಿದರು.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಜೆನ್ನಿ ಅವರ ಶಿಯಾಪರೆಲ್ಲಿ (Schiaparelli) ಗೌನ್ ಒಂದು ಕಡೆಯಾದರೆ, ಅವರು ತೊಟ್ಟಿದ್ದ ಚಿನ್ನದ ಇಯರಿಂಗ್ಸ್ (Gold Drop Earrings) ಇಡೀ ಫ್ಯಾಷನ್ ಲೋಕದ ಗಮನ ಸೆಳೆಯಿತು.

 

ವಿಶೇಷವೆಂದರೆ, ಈ ಆಭರಣಗಳು ಭಾರತದ ಮುಕೇಶ್ ಅಂಬಾನಿ ಮಾಲೀಕತ್ವದ ನಿತಾ ಅಂಬಾನಿ ಅವರ ‘ಸ್ವದೇಶ್’ (Swadesh) ಬ್ರ್ಯಾಂಡ್‌ನದ್ದು. ಭಾರತೀಯ ಕುಶಲಕರ್ಮಿಗಳ ಅದ್ಭುತ ಕಲೆಗೆ ಜಾಗತಿಕ ವೇದಿಕೆಯಲ್ಲಿ ಜೆನ್ನಿ ಕಿಮ್ ಹೊಸ ಮೆರುಗು ನೀಡಿದ್ದಾರೆ ಎಂದು ‘ಸ್ವದೇಶ್’ ಸಂಸ್ಥೆ ಇನ್‌ಸ್ಟಾಗ್ರಾಮ್‌ನಲ್ಲಿ ಸಂಭ್ರಮ ಹಂಚಿಕೊಂಡಿದೆ.

ಟೈಮ್ 100 ಪಟ್ಟಿಯಲ್ಲಿ ಭಾರತೀಯರ ದರ್ಬಾರ್:
ಈ ವರ್ಷದ ಟೈಮ್ 100 ಪಟ್ಟಿಯಲ್ಲಿ ಜೆನ್ನಿ ಕಿಮ್ ಮಾತ್ರವಲ್ಲದೆ, ಭಾರತದಿಂದ ಬಾಲಿವುಡ್ ನಟ ರಣಬೀರ್ ಕಪೂರ್ ಮತ್ತು ಖ್ಯಾತ ಶೆಫ್ ವಿಕಾಸ್ ಖನ್ನಾ ಕೂಡ ಸ್ಥಾನ ಪಡೆದಿದ್ದಾರೆ. ಲೂಕ್ ಕೋಂಬ್ಸ್, ಡಕೋಟಾ ಜಾನ್ಸನ್ ಅಂತಹ ಅಂತರಾಷ್ಟ್ರೀಯ ದಿಗ್ಗಜರ ನಡುವೆ ಭಾರತೀಯ ಕಲೆ ಮತ್ತು ಪ್ರತಿಭೆಗಳು ರಾರಾಜಿಸಿರುವುದು ಈ ಬಾರಿಯ ವಿಶೇಷತೆ.

Blackpink Jennie's Time 100 Appearance

ಜೆನ್ನಿ ಅವರ ಮೊದಲ ಸೋಲೋ ಆಲ್ಬಂ ‘ರೂಬಿ’ (RUBY) ಜಾಗತಿಕವಾಗಿ 10 ಲಕ್ಷಕ್ಕೂ ಅಧಿಕ ಪ್ರತಿಗಳು ಮಾರಾಟವಾಗಿ ದಾಖಲೆ ಬರೆದಿದೆ. ಇದೀಗ ಟೈಮ್ಸ್ ಮ್ಯಾಗಜಿನ್‌ನ ಪ್ರಭಾವಿ ವ್ಯಕ್ತಿಗಳ ಪಟ್ಟಿಗೆ ಸೇರುವ ಮೂಲಕ ಜೆನ್ನಿ ಕಿಮ್ ತನ್ನ ಜನಪ್ರಿಯತೆಯನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿದ್ದಾರೆ.

error: Content is protected !!