ಅತ್ತೆ ಮಗಳನ್ನೇ ಮದುವೆಯಾಗುವುದಾಗಿ ನಂಬಿಸಿ ದೈಹಿಕವಾಗಿ ಬಳಸಿಕೊಂಡು, ಮತ್ತೋರ್ವಳನ್ನು ಮದುವೆಯಾದ ಶಿಕ್ಷಕ

ಕೊಪ್ಪಳ: ಮದುವೆಯಾಗುವುದಾಗಿ ನಂಬಿಸಿ ಸ್ವಂತ ಅತ್ತೆ ಮಗಳನ್ನೇ ಐದು ವರ್ಷಗಳಿಂದ ಪ್ರೀತಿಸಿ, ದೈಹಿಕವಾಗಿ ಬಳಸಿಕೊಂಡು ಹಿರಿಯರ ಸಮ್ಮುಖದಲ್ಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಆದ್ರೆ, ಇದೀಗ ಬಸವರಾಜ ಮತ್ತೋರ್ವಳ ಜೊತೆ ಮದುವೆಯಾಗಿದ್ದು, ವಿವಾಹ ನೋಂದಣಿ ಪತ್ರವನ್ನು ಅತ್ತೆ ಮಗಳಿಗೆ ಕಳುಹಿಸಿರುವಂತಹ ಘಟನೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಕನ್ನೇರಮಡುವಿನ ನಡೆದಿದೆ. ಇದರಿಂದ ಬಸವರಾಜ ಅತ್ತೆ ಮಗಳು ಕಂಗಾಲಾಗಿ, ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಸರಕಾರಿ ಶಿಕ್ಷಕನಾಗಿ ಸಮಾಜಕ್ಕೆ ಮಾದರಿಯಾಗಬೇಕಿದ್ದ ಬಸವರಾಜ ಹರಿಜನ್ ಎಂಬಾತ ತನ್ನ ನೈತಿಕತೆಯನ್ನೇ ಮರೆತು ಹುಲಸನಟ್ಟಿ ಮೂಲದ ಯುವತಿ ಕರೆಮ್ಮಾ ಜೊತೆ ಆಕೆ ಬಿಎಸ್ಸಿ ಓದುತ್ತಿದ್ದಾಗಿನಿಂದಲೂ ಸಂಪರ್ಕವಿತ್ತು. ಸ್ವಂತ ಅತ್ತೆ ಮಗ ಎನ್ನುವ ಕಾರಣಕ್ಕೆ ಯುವತಿ ಆತನನ್ನು ಕುರುಡಾಗಿ ನಂಬಿದ್ದಳು. ನೌಕರಿ ಸಿಕ್ಕ ತಕ್ಷಣ ಮದುವೆಯಾಗುವುದಾಗಿ ನಂಬಿಸಿದ್ದ ಬಸವರಾಜ, ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಇಷ್ಟೇ ಅಲ್ಲದೆ, ಕನಕಗಿರಿ ತಾಲೂಕಿನ ಕನ್ನೇರಮಡುವಿನಲ್ಲಿ ಅದ್ದೂರಿಯಾಗಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದ. ಆದರೆ ಸರಕಾರಿ ಶಿಕ್ಷಕನ ಕೆಲಸ ದೊರೆತ ಮೇಲೆ ಪ್ರೀತಿಸಿದ ಅತ್ತೆ ಮಗಳನ್ನು ನಡುನೀರಲ್ಲಿ ಬಿಟ್ಟು, ರತ್ನವ್ವ ಎಂಬ ಯುವತಿಯೊಂದಿಗೆ ರಹಸ್ಯವಾಗಿ ವಿವಾಹವಾಗಿದ್ದಾನೆ.

ಮೋಸ ಮಾಡಿದ್ದಷ್ಟೇ ಅಲ್ಲದೆ ಬಸವರಾಜ, ರತ್ನವ್ವಳೊಂದಿಗೆ ತಾನು ಮಾಡಿಕೊಂಡ ಮದುವೆಯ ನೋಂದಣಿ ಪತ್ರವನ್ನು ಸಂತ್ರಸ್ತ ಯುವತಿಯ ಮನೆಗೆ ಕಳುಹಿಸಿದ್ದಾನೆ. ಇದರಿಂದ ಕಂಗಾಲಾದ ಯುವತಿ ಮತ್ತು ಆಕೆಯ ಪೋಷಕರು ಈಗ ನ್ಯಾಯಕ್ಕಾಗಿ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ಈ ಸಂಬಂಧ ಪೊಲೀಸರು ಸಹ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

error: Content is protected !!