ಕಾರು-ಡಂಪರ್ ಟ್ರಕ್ ಡಿಕ್ಕಿ: ಮೂವರು ಸಜೀವದಹನ, ಐವರ ಸ್ಥಿತಿ ಗಂಭೀರ

ರಾಜಸ್ಥಾನ: ಕಾರು ಹಾಗೂ ಡಂಪರ್ ಟ್ರಕ್ ನಡುವೆ ಡಿಕ್ಕಿ ಸಂಭವಿಸಿ, ಬೆಂಕಿ ಹೊತ್ತಿಕೊಂಡ ಪರಿಣಾಮ ಮೂವರು ಸಜೀವದಹನವಾಗಿದ್ದು, ಐವರ ಸ್ಥಿತಿ ಗಂಭೀರವಾಗಿರುವ ಘಟನೆ ರಾಜಸ್ಥಾನದ ಚುರು ಜಿಲ್ಲೆಯಲ್ಲಿ ನಡೆದಿದೆ.

ಹಮೀರ್ವಾಸ್ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ಪಿಲಾನಿ-ಸಾದುಲ್‌ಪುರ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಮದುವೆಯಲ್ಲಿ ಭಾಗವಹಿಸಿ ಪಿಲಾನಿಯಿಂದ ಹಿಂದಿರುಗುತ್ತಿದ್ದ ಮಹೀಂದ್ರಾ ಬೊಲೆರೊ ತ್ರಿಪಾಲಿ ಟೋಲ್ ಪ್ಲಾಜಾ ಬಳಿ ಡಂಪರ್ ಟ್ರಕ್​ಗೆ ಡಿಕ್ಕಿ ಹೊಡೆದಿದೆ. ಎರಡೂ ವಾಹನಗಳಿಗೂ ಕ್ಷಣದಲ್ಲಿ ಬೆಂಕಿ ತಗುಲಿತ್ತು.

ಗಾಯಗೊಂಡ ಐದು ಜನರನ್ನು ನಂತರ ಪಿಲಾನಿಯ ಬಿರ್ಲಾ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು. ಈಗ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಜೈಪುರದ ಮತ್ತೊಂದು ಆಸ್ಪತ್ರೆಗೆ ಕಳುಹಿಸಲಾಗಿದೆ.

error: Content is protected !!