ಮಳಲಿ ಸೂರ್ಯನಾರಾಯಣ ದೇವಸ್ಥಾನ: ಮಹಿಳಾ ಜೀರ್ಣೋದ್ಧಾರ ಸಮಿತಿ ರಚನೆ

ಮಂಗಳೂರು: ಮಳಲಿ (ಮಣೇಲ್) ದೇವರಗುಡ್ಡೆ ಶ್ರೀ ಸೂರ್ಯನಾರಾಯಣ ದೇವಸ್ಥಾನದ ನಾಗದೇವರ ಪ್ರತಿಷ್ಠಾಪನೆಯ ಪೂರ್ವಭಾವಿ ಸಭೆಯು ಇತ್ತೀಚೆಗೆ ಜರುಗಿತು. ಈ ಸಂದರ್ಭದಲ್ಲಿ ದೇವಸ್ಥಾನದ ಪುನರ್ನಿರ್ಮಾಣ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಮಹಿಳೆಯರ ಪಾತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ನೂತನ ʻಜೀರ್ಣೋದ್ಧಾರ ಸಮಿತಿಯ ಮಹಿಳಾ ಘಟಕʼವನ್ನು ರಚಿಸಲಾಯಿತು.

ಶಾಲಿನಿ ವಿ. ರಾವ್ ಗಜಂತೋಡಿ
ಶಾಲಿನಿ ವಿ. ರಾವ್ ಗಜಂತೋಡಿ

ಸಭೆಯಲ್ಲಿ ಮಹಿಳಾ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಸಂಚಾಲಕರಾಗಿ ಶಾಲಿನಿ ವಿ. ರಾವ್ ಗಜಂತೋಡಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಸುಜಾತಾ ರುಕ್ಮಯ ಕುಲಾಲ್, ಚಂಚಲಾಕ್ಷಿ ಕುಕ್ಕಟ್ಟೆ, ಪ್ರಭಾವತಿ ದೇವರಗುಡ್ಡೆ, ಕಲಾವತಿ ಪದ್ಮನಾಭ, ಪ್ರೇಮಾ ರಾಮಚಂದ್ರ, ಸೌಮ್ಯ ಮೋಹನ್, ನಾರಾಯಣಿ ಶೆಟ್ಟಿ, ರಾಜೀವಿ ದೇಜಪ್ಪ, ಉಷಾ ತೆಕ್ಕಿಪಡ್ಪು ಮತ್ತು ರೇಖಾ ಮೊಗರು ಸಹ ಸಂಚಾಲಕರಾಗಿ ಆಯ್ಕೆಯಾಗಿದ್ದಾರೆ.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶೇಖರ್ ಜೋಗಿ ಮಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಈ ಸಭೆಯಲ್ಲಿ ನಾಗದೇವರ ಪ್ರತಿಷ್ಠಾಪನಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಲಾಯಿತು. ಇದೇ ವೇಳೆ ಭಜನಾ ಕಾರ್ಯಕ್ರಮಗಳ ವ್ಯವಸ್ಥಿತ ನಿರ್ವಹಣೆಗಾಗಿ ಪ್ರತ್ಯೇಕ ʻಭಜನಾ ನಿರ್ವಹಣಾ ಸಮಿತಿ’ಯನ್ನು ಕೂಡ ರಚಿಸಲು ನಿರ್ಧರಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಕಾರ್ಯಾಧ್ಯಕ್ಷರಾದ ಭಾಸ್ಕರ ಭಟ್ ಗಂಜಿಮಠ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶಿವರಾಜ್ ನಾರಳ ಕಾರ್ಯಕ್ರಮ ನಿರೂಪಿಸಿ, ಸಂಘಟನಾ ಕಾರ್ಯದರ್ಶಿ ಹರೀಶ್ ಮಟ್ಟಿ ವಂದಿಸಿದರು. ನೂತನವಾಗಿ ಆಯ್ಕೆಯಾದ ಮಹಿಳಾ ಪದಾಧಿಕಾರಿಗಳನ್ನು ಸಮಿತಿಯ ವತಿಯಿಂದ ಅಭಿನಂದಿಸಲಾಯಿತು.

error: Content is protected !!