ಸೀರೆ ಬದಲು ನೈಟಿ ಧರಿಸಿದ್ದಕ್ಕೆ ಕೋಪಗೊಂಡು ಪತ್ನಿಗೆ ಬೆಂಕಿ ಹಚ್ಚಿದ ಪತಿ!!

ಬೆಳಗಾವಿ: ಸೀರೆ ಬದಲು ಪತ್ನಿ ನೈಟಿ ಧರಿಸಿದ್ದಕ್ಕೆ ಕೋಪಗೊಂಡ ಪತಿ, ಆಕೆಗೆ ಬೆಂಕಿ ಹಚ್ಚಿದ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ.

ಮಂಜುಳಾ ಪಾಟೀಲ ಗಾಯಾಳು ಪತ್ನಿ, ಹತ್ತರವಾಡ ಗ್ರಾಮದ ಕೃಷ್ಣ ಪಾಟೀಲ ಕೃತ್ಯ ಎಸಗಿದ ಪತಿ.

ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ಎಂಟು ವರ್ಷಗಳ ಹಿಂದೆ ಮದುವೆಯಾದ ದಂಪತಿ ನಂದಗಡದಲ್ಲಿ ವಾಸವಿದ್ದರು. ಈ ಮಧ್ಯೆ ಮನೆಯಲ್ಲಿ ನೈಟಿ ಧರಿಸುವ ವಿಚಾರಕ್ಕೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಈ ವಿಚಾರವಾಗಿ ಮತ್ತೆ ಜಗಳ ಉಂಟಾಗಿ, ಪತಿ ಕೃಷ್ಣಾ ಪಾಟೀಲ ಕೋಪದಿಂದ ಪತ್ನಿಗೆ ಬೆಂಕಿ ಹಚ್ಚಿದ್ದಾನೆ. ಬೆಂಕಿ ತಗುಲುತ್ತಿದ್ದಂತೆ ಮಂಜುಳಾ ಕೂಗಾಡಿದ್ದು, ಆಕೆಯ ಅಳುವ ಶಬ್ದ ಕೇಳಿ ಸ್ಥಳೀಯರು ಧಾವಿಸಿ ರಕ್ಷಿಸಿದ್ದಾರೆ.

ತೀವ್ರವಾಗಿ ಸುಟ್ಟ ಗಾಯಗೊಂಡಿರುವ ಮಂಜುಳಾ ಪಾಟೀಲ ಅವರನ್ನು ತಕ್ಷಣ ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಅವರು ಗೋವಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

error: Content is protected !!