ಪೆರ್ನಾಜೆ: ಜ್ಞಾನವಿದೆ ಎಂದು ಸುಮ್ಮನೆ ಕುಳಿತರೆ ಪ್ರಯೋಜನವಿಲ್ಲ ಜ್ಞಾನದ ಬಳಕೆಯ ದಾರಿ ತಿಳಿದವರು ಮಾತ್ರ ಯಶಸ್ವಿಯಾಗುತ್ತಾರೆ. ನಿಂದಿಸಲಿ, ನೋಯಿಸಲಿ, ಶಪಿಸಲಿ ಬೇಕಾದರೆ ಮನೆಬಂದಂತೆ ಕೂಗಾಡಲಿ ನೀನು ಸುಮ್ಮನೆ ಇದ್ದು ಬಿಡು ಅವರವರ ಕರ್ಮಫಲ ಜೀವನಕ್ಕೆ ದೊರೆತೇ ದೊರೆಯುತ್ತದೆ.

ಜನತಾ ನ್ಯೂಸ್ ಕನ್ನಡ ವತಿಯಿಂದ ಆಯೋಜಿಸಲಾಗಿರುವ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಕುಮಾರ ಪೆರ್ನಾಜೆ ಅವರನ್ನು ಇತ್ತೀಚೆಗೆ ಬೆಂಗಳೂರಿನ ನಾಗರಬಾವಿ ಕೆಎಲ್ಇ ಕಾನೂನು ಕಾಲೇಜ್ ಹತ್ತಿರ ಅರಮನೆ ವೆನ್ಯುನಲ್ಲಿ ಮನರಂಜನೆ ಫ್ಯಾಶನ್ ಶೋ ಮ್ಯೂಸಿಕಲ್ ನೈಟ್ ನೃತ್ಯ ಸಂಜೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಜೇನು ಕೃಷಿ ಕ್ಷೇತ್ರದಲ್ಲಿನ ಸಾಧನೆಗಳ ಸರದಾರನಿಗೆ ಗಣನೀಯ ಸೇವೆ ಸಾಧನೆ ಹಾಗೆ ಇವರ ಪ್ರತಿಭೆಯನ್ನು ಪರಿಗಣಿಸಿ ಜನತಾ ಕೃಷಿ ರತ್ನ ವನ್ನು ಆರ್ಯನ್ ಭಾರದ್ವಾಜ್ ಜನತಾ ನ್ಯೂಸ್ ಮ್ಯಾನೇಜಿಂಗ್ ಡೈರೆಕ್ಟರ್ ಪೇಟ ಶಾಲು ತೊಡಿಸಿ ಹಾರ ಟ್ರೋಪಿ ವಿಶೇಷ ರೀತಿಯ ಟ್ರೋಫಿ ಪ್ರಶಸ್ತಿ ಪತ್ರವನ್ನು ಪ್ರಧಾನ ಮಾಡಿದರು.

ಆರ್ಯನ್ ಕೆ ಸಂಸ್ಥೆಗೆ ಜೇನುತುಪ್ಪವನ್ನು ಕುಮಾರ್ ಪೆರ್ನಾಜೆ ಅವರು ನೀಡಿ ಜೇನು ಗೂಡಿನಂತೆ ಒಗ್ಗಟ್ಟಿನಿಂದ ಕೋಡಿ ಸದಾ ಸಿಹಿಯಿಂದ ಬೆಳಗುತ್ತಿರಲಿ ಎಂದು ಶುಭ ಹಾರೈಸಿದರು.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ
ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಶಿವರಾಮೇಗೌಡ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮುಖ್ಯ ಸಂಪಾದಕರು ಜನತಾ ನ್ಯೂಸ್ ಕನ್ನಡ ರಾಜ್ಯಾಧ್ಯಕ್ಷರು ಕರ್ನಾಟಕ ಯುವಶಕ್ತಿಯ ಕೆ ಎಸ್ ಲಿಂಗೇಗೌಡ ಸಮಾರಂಭದ ಅಧ್ಯಕ್ಷರು, ಸಹ ಸಂಸ್ಥಾಪಕರು doczee ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್, ಶ್ರೀಮತಿ ಮೋನಿಷಾ ಆರ್ಯನ್ ಭಾರದ್ವಾಜ್ ಬೆಂಗಳೂರು, ಬೆಂಗಳೂರಿನ ಪಿ ಎಸ್ ಭಟ್ ನೂಜಿ ಪುತ್ತೂರು, ಎಕ್ಸ ರೇಜನಲ್ ಮ್ಯಾನೇಜರ್ ಆಫ್ ರಿಲಯನ್ಸ್ ಸೆಲ್ಯೂಲೋಸ್ ಪ್ರಾಡಕ್ಟ್ಸ್ ಲಿಮಿಟೆಡ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶೋಭಾ ಹಾಗೂ ಹರಿಚೇತ್ ಕಾರ್ಯಕ್ರಮ ನಿರೂಪಿಸಿದರು.