
ಉಡುಪಿ: ಮಡ್‌ಗಾಂವ್ ಸಮೀಪದ ರಾವನ್‌ಫೂಂಡ್ ಪ್ರದೇಶದಲ್ಲಿ ರಸ್ತೆ ಮೇಲ್ಸೇತುವೆ ನಿರ್ಮಾಣ ಕಾರ್ಯದ ಭಾಗವಾಗಿ ಗರ್ಡರ್ ಅಳವಡಿಸುವ ಕೆಲಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎ.24 ರವರೆಗೆ ಟ್ರಾಫಿಕ್ ಬ್ಲಾಕ್ ಮತ್ತು ಪವರ್‌ಬ್ಲಾಕ್ ಇರಲಿದೆ ಹಾಗಾಗಿ ಕೆಲವು ರೈಲುಗಳ ಸಂಚಾರದಲ್ಲಿ ಸ್ವಲ್ಪ ವಿಳಂಬವಾಗಲಿದೆ.
ನಿಮ್ಮ ಕನಸು ನನಸಾಗಿಸಲು ಮೆಗಾ ಗೋಲ್ಡ್ ಸೇವಿಂಗ್ಸ್ ಸ್ಕೀಮ್ ಸೇರಿ

ರೈಲು ಸಂಖ್ಯೆ(12619) ಲೋಕಮಾನ್ಯ ತಿಲಕ್ ಟರ್ಮಿನಲ್-ಮಂಗಳೂರು ಸೆಂಟ್ರಲ್ ಎಕ್ಸ್ ಪ್ರಸ್ ರೈಲು ಎ.22ರಂದು ಮಡ್‌ಗಾಂವ್ ಜಂಕ್ಷನ್‌ನಲ್ಲಿ 20 ನಿಮಿಷ ವಿಳಂಬವಾಗಲಿದೆ. ರೈಲು ಸಂಖ್ಯೆ(20932) ಇಂದೋರ್-ತಿರುವನಂತಪುರಂ ನಾರ್ತ್ ಎಕ್ಸ್ ಪ್ರಸ್ ರೈಲು ಮಡ್‌ಗಾಂವ್ ಜಂಕ್ಷನ್‌ನಲ್ಲಿ 35 ನಿಮಿಷ ವಿಳಂಬವಾಗಲಿದೆ.
