ಮಂಗಳೂರು: ಮಧ್ಯ ಶ್ರೀ ಖಡ್ಗೇಶ್ವರ ಖಡ್ಗೇಶ್ವರಿ ದೇವಸ್ಥಾನದ ಜಾತ್ರ ಮಹೋತ್ಸವವು ಎಪ್ರಿಲ್ 29 ರಿಂದ ಮೇ 1 ರ ವರೆಗೆ ನಡೆಯಲಿದೆ.

ಎಪ್ರಿಲ್ 29 ರಂದು ದೇವಸ್ಥಾನದಲ್ಲಿ ಬೆಳಿಗ್ಗೆ 9 ರಿಂದ ಗಣಹೋಮ, ತೋರಣ ಮುಹೂರ್ತ, ಸಾಮೂಹಿಕ ಪ್ರಾರ್ಥನೆ ಮಧ್ಯಾಹ್ನ 12:30ಕ್ಕೆ ಮಧ್ಯಬೀಡುವಿನಲ್ಲಿ ಚೌತಿಹಬ್ಬ, ಅನ್ನಸಂತರ್ಪಣೆ ಸಂಜೆ 7 ಗಂಟೆಗೆ ಚಪ್ಪರ ಮುಹೂರ್ತ ನಂತರ ಸ್ಥಳೀಯ ಅಂಗನವಾಡಿ ಮತ್ತು ಶಾಲಾ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಖಡ್ಗೇಶ್ವರ ಖಡ್ಗೇಶ್ವರಿ ಮಹಿಳಾ ಮಂಡಲ ವತಿಯಿಂದ ಪನ್ಯ ಅರ್ತ ಅವೊಡು ಕಿರು ಪ್ರಹಸನ, ನಂತರ ಮಧ್ಯ ಪ್ರೇಂಡ್ಸ್ ವತಿಯಿಂದ ಚಾ ಪರ್ಕ ಕಲಾವಿದರಿಂದ ನಾಯಿದ ಬೀಲ ನಾಟಕ ನಡೆಯಲಿದೆ.

ಎಪ್ರಿಲ್ 30 ರಂದು ಬೆಳಿಗ್ಗೆ 10 ಕ್ಕೆ ನಾಗಸನ್ನಿದಿಯಲ್ಲಿ ಆಶ್ಲೇಷಾ ಪೂಜೆ, ನವಕಲಶಾಭಿಷೇಕ ಮಧ್ಯಾಹ್ನ 12:30ಕ್ಕೆ ಮಹಾಪೂಜೆ ನಂತರ ಮಹಾ ಅನ್ನಸಂತರ್ಪಣೆ ಸಂಜೆ 6 ರಿಂದ ಮಂತ್ರಾಕ್ಷಿ ಸಮಿತಿ ಮಧ್ಯ ವತಿಯಿಂದ ನಗೆಹನಿಯ ಮ್ಯಾಜಿಕ್ ಶೋ, ಗ್ರಾಮ ಸೇವಾ ಸಂಘದ ವತಿಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಂತರ ಕಿನ್ನಿಗೋಳಿ ವಿಜಯ ಕಲಾವಿದರಿಂದ ಅಮ್ಮು ಅಮುಂಡರಾ ತುಳು ನಾಟಕ ರಾತ್ರಿ 11-00 ಕ್ಕೆ ಮಹಾಗಣಪತಿಗೆ ರಂಗಪೂಜೆ, ಕುಮಾರ ಸಿರಿಗಳ ದರ್ಶನ, ಬಲಿ ಹೊರಟು ಮೂಲಸ್ಥಾನಕ್ಕೆ ಸವಾರಿ, ದೈವಗಳ ಬೇಟಿ, ಕಟ್ಟೆಪೂಜೆ, ದೇವರಿಗೆ ರಂಗಪೂಜೆ, ಹೂವಿನ ಪೂಜೆ, ಬಲಿ ಉತ್ಸವ ನಡೆಯಲಿದೆ.

ಮೇ 1ಕ್ಕೆ ಬೆಳಿಗ್ಗೆ 9ಕ್ಕೆ ನಾಗದೇವರ ಸನ್ನಿಧಿಯಲ್ಲಿ ನಾಗತಂಬಿಲ ಸೇವೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಣನೆ ತಿಳಿಸಿದೆ.