
ಮುಡಿಪು: ಕೈರಂಗಳ ಶಾರದಾ ಗಣಪತಿ ವಿದ್ಯಾಕೇಂದ್ರ ಪುಣ್ಯಕೋಟಿನಗರದ ಶಾಲಾ ಮಕ್ಕಳಿಂದ ಭಾನುವಾರ(ಏ.19) ಅಮೋಘ ಜೋಡಾಟ ಶ್ರೀ ದೇವಿಮಹಾತ್ಮೆ ಯಕ್ಷಗಾನ ಬಯಲಾಟ ಜರಗಿತು.

ಯಕ್ಷಗುರು ಕಟೀಲು ಮೇಳದ ಖ್ಯಾತ ಕಲಾವಿದರಾದ ಅಶ್ವಥ್ ಮಂಜನಾಡಿ ನಿರ್ದೇಶನದಲ್ಲಿ ಶಾಲಾ ಸಂಚಾಲಕರಾದ ಕಲಾಪೋಷಕರೂ ಆದ ಶ್ರೀ ಟಿ.ಜಿ.ರಾಜಾರಾಮ್ ಭಟ್ ಇವರ ಹುಟ್ಟು ಹಬ್ಬದ ಸುಸಂಧರ್ಭದಲ್ಲಿ ಅವರ ಆಶಯದಂತೆ ಈ ಜೋಡಾಟ ಜರುಗಿದ್ದು, ಸೇರಿದ್ದ ಸಾವಿರಾರು ಕಲಾಪ್ರೇಕ್ಷಕರನ್ನು ಬೆರಗಾಗಿಸಿತು.

ಹಿಮ್ಮೇಳದಲ್ಲಿ ಪ್ರಸಿದ್ದ ಹಿಮ್ಮೇಳವಾದಕರನ್ನು ಬಳಸಿಕೊಳ್ಳಲಾಗಿದ್ದು ಅಮೋಘವಾಗಿ ಬಹಳ ಸುಂದರವಾಗಿ ಈ ಯಕ್ಷಗಾನ ಮೂಡಿಬಂತು, ಈ ಸಂಧರ್ಭದಲ್ಲಿ ಕಲಾಪೋಷಕರು, ಕರ್ಮಾಟಕ ಸರಕಾರದ ಮಾನವಹಕ್ಕುಗಳ ಆಯೋಗದ ಅಧ್ಯಕ್ಷರೂ ಆದ ಶ್ರೀ ಶ್ಯಾಮ್ ಭಟ್ ಉಪಸ್ಥಿತರಿದ್ದು, ಯಕ್ಷಗಾನ ವೀಕ್ಷಿಸಿ ಮಕ್ಕಳ ಉಮೇದುವಾರಿಕೆ ಕೊಂಡಾಡಿದರು. ಊರ ಪರವೂರ ಕಲಾರಸಿಕರು ಮತ್ತು ಮಕ್ಕಳ ಹೆತ್ತವರು ಜೊಡಾಟಕ್ಲೆ ಸಾಕ್ಷಿಯಾದರು.
