ಬಂಟ್ವಾಳ: ಶಾಲಾ ಬಸ್ ಮೇಲೆ ಉರುಳಿದ ಮರ, ಬಾಲಕಿ ದುರ್ಮರಣ!

ಬಂಟ್ವಾಳ: ಚಲಿಸುತ್ತಿದ್ದ ಶಾಲಾ ಬಸ್ ಮೇಲೆ ಭಾರೀ ಗಾತ್ರದ ಮರ ಉರುಳಿ ಬಿದ್ದ ಪರಿಣಾಮ ಬಸ್​ನಲ್ಲಿದ್ದ 5 ವರ್ಷದ ಪುಟ್ಟ ಕಂದಮ್ಮ ಸಾವನ್ನಪ್ಪಿದ್ದು, ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಸಂಜೆ ನಡೆದಿದೆ.
ಬಂಟ್ವಾಳ ತಾಲೂಕಿನ ಬಿಳಿಯೂರಿನ ಚಂದ್ರಹಾಸ ಅವರ ಪುತ್ರಿ ಚಿರನ್ವಿ ಮೃತಪಟ್ಟ ದುರ್ದೈವಿ.
ಸಂಜೆ ಶಾಲೆ ಮುಗಿಸಿ ಮಕ್ಕಳನ್ನು ಕರೆದೊಯುತ್ತಿದ್ದ ಕಲ್ಲಡ್ಕ ಶ್ರೀರಾಮ ಶಾಲೆಗೆ ಸೇರಿದ ಶಾಲಾ ವಾಹನದ ಮೇಲೆ ಬಂಟ್ವಾಳ ತಾಲೂಕಿನ ಕಲ್ಲೇಟಿ ಕಾನಲ್ತಾಯ ದೈವಸ್ಥಾನದ ಬಳಿ ಬೃಹತ್​​ ಗಾತ್ರದ ಮರ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಬಸ್​ನಲ್ಲಿದ್ದ ಬಾಲಕಿ ಚಿರನ್ವಿ ಸೇರಿದಂತೆ ಮೂವರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು.

ಚಿರನ್ವಿಯನ್ನ ಸ್ಥಳೀಯ ಮಹಿಳೆಯೊಬ್ಬರು ಆಟೋರಿಕ್ಷಾದಲ್ಲಿ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ಕರೆದುಕೊಂಡು ಬರುತ್ತಿದ್ದ ದಾರಿ ಮಧ್ಯೆ ಚಿರನ್ವಿ ಸಾವನ್ನಪ್ಪಿದ್ದಾಳೆ. ಇಬ್ಬರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.

error: Content is protected !!