ಮಾರಕಾಸ್ತ್ರ ಹಿಡಿದು ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರ ಬಂಧನ!

ಕಾರ್ಕಳ: ನಗರದ ಬಸ್‌ ನಿಲ್ದಾಣದ ಬಳಿ ಮಾರಕಾಸ್ತ್ರದೊಂದಿಗೆ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರನ್ನು ನಗರ ಪೊಲೀಸರು ಬಂಧಿಸಿದ್ದಾರೆ.


ಕೊಪ್ಪಳ ಜಿಲ್ಲೆಯ ಹನುಮಪ್ಪ (29) ಮತ್ತು ಮರಿಯಪ್ಪ (32) ಬಂಧಿತರು.

ಎ.16ರಂದು ರಾತ್ರಿ ಪೊಲೀಸ್ ಉಪನಿರೀಕ್ಷಕ ಮುರಳೀಧರ ನಾಯ್ಕ್‌ ಮತ್ತು ತಂಡ ರೌಂಡ್ಸ್‌ನಲ್ಲಿದ್ದಾಗ, ಹೂವಿನ ಅಂಗಡಿಯೊಂದರ ಹಿಂಭಾಗ ಮುಖಕ್ಕೆ ಬಟ್ಟೆ ಕಟ್ಟಿ ಚೂರಿ ಹಿಡಿದುಕೊಂಡು ಇಬ್ಬರು ಪತ್ತೆಯಾಗಿದ್ದರು. ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!