ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ(ಎ.18) ರಾತ್ರಿ 8.30ಕ್ಕೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಚೇರಿ ತಿಳಿಸಿದೆ.

ಪ್ರಧಾನಿ ಮೋದಿ ಅವರು ಯಾವ ವಿಷಯದ ಕುರಿತು ಮಾತನಾಡಲಿದ್ದಾರೆ ಎಂಬುದು ಇನ್ನೂ ಖಚಿತವಾಗಿಲ್ಲ. ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ, ಮಹಿಳಾ ಮೀಸಲಾತಿ ಮಸೂದೆಯನ್ನು ಬೆಂಬಲಿಸದ ವಿಪಕ್ಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ವಿಪಕ್ಷಗಳ ಈ ತಪ್ಪಿಗಾಗಿ ಮುಂದಿನ ದಿನಗಳಲ್ಲಿ ರಾಜಕೀಯವಾಗಿ ಬೆಲೆ ತೆರಬೇಕಾಗುತ್ತದೆ ಎಂದು ತಿಳಿಸಿದೆ.

ಮಹಿಳೆಯರ ವಿಚಾರದಲ್ಲಿ ವಿಪಕ್ಷಗಳು ಋಣಾತ್ಮಕ ಮನಸ್ಥಿತಿ ಹೊಂದಿದ್ದು, ಮಸೂದೆಯನ್ನು ಬೆಂಬಲಿಸದ ವಿಪಕ್ಷಗಳ ಧೋರಣೆ ಬಗ್ಗೆ ದೇಶದ ಪ್ರತಿ ಮೂಲೆ, ಮೂಲೆಗೂ ಮಾಹಿತಿ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.

ಶುಕ್ರವಾರ(ಎ.17) ಲೋಕಸಭೆಯಲ್ಲಿ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆ ಪರವಾಗಿ 293 ಮತ ಹಾಗೂ ಮಸೂದೆ ವಿರುದ್ಧವಾಗಿ 230 ಮತ ಚಲಾವಣೆಯಾಗಿತ್ತು. ಮಸೂದೆ ಅಂಗೀಕಾರಕ್ಕೆ 360 ಮತಗಳ ಅಗತ್ಯವಿತ್ತು. ಆದರೆ ವಿಪಕ್ಷಗಳ ಬೆಂಬಲದ ಕೊರತೆಯಿಂದ ಮಸೂದೆಗೆ ಸೋಲಾಗಿ.