
ಸುರತ್ಕಲ್: ಕೃಷ್ಣಾಪುರ ಮಠದ ಸಮೀಪದ ಬಾಡಿಗೆ ಮನೆಯ ನಿವಾಸಿ ಮೂಲತಃ ಬಳ್ಳಾರಿ ಸಮೀಪದ ಕುಷ್ಟಗಿಯ ಮಲ್ಲಿಕಾರ್ಜುನ(20) ಎಂಬಾತನ ಮೃತದೇಹ ಕೊಲೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈತ ಕೃಷ್ಣಾಪುರ ಹಾಗೂ ಸುರತ್ಕಲ್ ಪರಿಸರದಲ್ಲಿ ಗುತ್ತಿಗೆದಾರರೊಂದಿಗೆ ಕೂಲಿ ಕಾರ್ಮಿಕನಾಗಿ ಸುಮಾರು ವರ್ಷಗಳಿಂದ ದುಡಿಯುತ್ತಿದ್ದ ಎನ್ನಲಾಗಿದೆ. ಈತ ಮಲಗಿದ್ದೆ ಸಂದರ್ಭದಲ್ಲಿ ಅಣ್ಣ ಕಲ್ಲು ಎತ್ತಿಹಾಕಿ ಕೊಲೆಗೈದಿದ್ದಾನೆ ಎನ್ನಲಾಗಿದೆ.

ನಿನ್ನೆ ತಡರಾತ್ರಿ ಈತ ಕೊಲೆಯಾಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು ಇಂದು ಮುಂಜಾನೆ ಕೊಲೆಯಾಗಿರಬೇಕೆಂದು ಶಂಕಿಸಲಾಗಿದೆ. ಅತನ ಸಹೋದರ ಸೋಮನಾಥನನ್ನು ಪೊಲೀಸರು ವಶಕ್ಕೆ ಪಡೆದಿದ್ದು ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಸ್ಥಳಕ್ಕೆ ಡಿಸಿಪಿ ಮಿಥುನ್, ಎಸಿಪಿ ಹಾಗೂ ಸುರತ್ಕಲ್ ಠಾಣಾಧಿಕಾರಿ ಪ್ರಮೋದ್, ಎಸ್ ಐ ರಘು ನಾಯಕ್ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.

ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಕೊಲೆಯ ಬಗ್ಗೆ ನಿಖರವಾದ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.
